ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ನಿವೇಶನ ರಹಿತರಿಗೆ ಹಕ್ಕು ಪತ್ರ ವಿತರಣೆ ಮಾಡಿದ ಶಾಸಕ ಜನಾರ್ಧನ ರೆಡ್ಡಿ

Published : 19 ಸೆಪ್ಟೆಂಬರ್ 2024, 14:09 IST
Last Updated : 19 ಸೆಪ್ಟೆಂಬರ್ 2024, 14:09 IST
ಫಾಲೋ ಮಾಡಿ
Comments

ಕೊಪ್ಪಳ: ತಾಲ್ಲೂಕಿನ ಕಲ್ಲತಾವರಗೇರಾ ಗ್ರಾಮದಲ್ಲಿ ನಿವೇಶನ ರಹಿತರಿಗೆ ಶಾಸಕ ಗಾಲಿ ಜನಾರ್ಧನ ರೆಡ್ಡಿ ಹಕ್ಕು ಪತ್ರ ವಿತರಣೆ ಮಾಡಿದರು.

ನಂತರ ಮಾತನಾಡಿದ ಅವರು, ‘ಗ್ರಾಮೀಣ ಭಾಗದ ನಿವೇಶನ ರಹಿತರಿಗೆ ನಿವೇಶನ ಒದಗಿಸಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿಗಳ ಆಶಯದಂತೆ ಗ್ರಾಮೀಣ ಆಶ್ರಯ ಯೋಜನೆಯಡಿ ಭೂಮಿ ಖರೀದಿಸಲಾಗಿದ್ದು, ಹಕ್ಕು ಪತ್ರ ವಿತರಣೆಗೆ ಕ್ರಮವಹಿಸಲಾಗಿದೆ‌. ಕ್ಷೇತ್ರದಲ್ಲಿ ಪ್ರತಿಯೊಂದು ಗ್ರಾಮಕ್ಕೂ ಮೂಲಭೂತ ಸೌಲಭ್ಯ ಒದಗಿಸಲು ವಿವಿಧ ಯೋಜನೆಗಳಡಿ ಅನುದಾನ ಒದಗಿಸಲಾಗಿದೆ’ ಎಂದರು.

ತಾ.ಪಂ ಇಒ ದುಂಡಪ್ಪ ತುರಾದಿ ಮಾತನಾಡಿ, ‘ಪ್ರತಿಯೊಂದು ಕುಟುಂಬಕ್ಕೆ ಆಹಾರ ನೀರು, ಬಟ್ಟೆ ಎಷ್ಟು ಮುಖ್ಯವೋ ನಿವೇಶನ ಮತ್ತು ಮನೆ ಕೂಡಾ ಅಷ್ಟೇ ಮುಖ್ಯ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರತಿಯೊಂದು ಕುಟುಂಬವು ಅನುಸರಿಸಬೇಕು’ ಎಂದರು.

ವಿಧಾನ ಪರಿಷತ್‌ ಸದಸ್ಯೆ ಹೇಮಲತಾ ನಾಯಕ, ತಹಶೀಲ್ದಾರ್‌ ವಿಠ್ಠಲ್‌ ಚೌಗಲಾ, ಗ್ರಾ.ಪಂ. ಅಧ್ಯಕ್ಷ ಗಂಗಪ್ಪ ನಾಯಕ, ಉಪಾಧ್ಯಕ್ಷೆ ಶಾಹೀದ್‌ ಬೇಗಂ, ಪಿಡಿಒ ಯಮನೂರಪ್ಪ ಕಬ್ಬಣ್ಣವರ್, ಗ್ರಾ.ಪಂ ಸದಸ್ಯರಾದ ಅಶೋಕ ಗುಳದಳ್ಳಿ, ಮಂಜುಳಾ ಹುಣಶಿಹಾಳ, ಶಿವಪುತ್ರಪ್ಪ ಪೂಜಾರ, ಸರೋಜ ಬಂಗಾಳಿ, ಮುಖಂಡರಾದ ಅಂಬಣ್ಣ ಮಾದಾಪುರ, ಕೊಟ್ರಯ್ಯ ಸಸಿಮಠ, ಪತ್ರೆಪ್ಪ ಏಣಿಗಿ, ಗಾಳಿದೇವಪ್ಪ ಹರಿಜನ, ಮಾರುತಿ ತಳವಾರ, ನಿವೃತ್ತ ಪಿಡಿಒ ಶರಣಯ್ಯ ಸಸಿಮಠ ಸಿದ್ದನಂಜಯ್ಯ, ನಿವೃತ್ತ ಕಾರ್ಯದರ್ಶಿ ಬೆಳ್ಳೆಪ್ಪ ಅಡಿಗಿ ಹಾಗೂ ಗ್ರಾ.ಪಂ ಸದಸ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT