ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಸಂಜೀವಿನಿ ಮೊಬೈಲ್ ಕ್ಯಾಂಟೀನ್‌ಗೆ ಚಾಲನೆ

ಉತ್ತಮ ಗುಣಮಟ್ಟದ ಉಪಾಹಾರ ತಯಾರಿಸಲು ಸಲಹೆ
Last Updated 3 ಅಕ್ಟೋಬರ್ 2021, 6:06 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಬೆಂಗಳೂರು, ಕೌಶಲ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಸ್ವ-ಸಹಾಯ ಸಂಘದ ಮಹಿಳೆಯರಿಂದ ಆರಂಭಗೊಂಡ ಸಂಜೀವಿನಿ ಮೊಬೈಲ್ ಕ್ಯಾಂಟೀನ್‌ಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಜಿಲ್ಲಾಡಳಿತ ಭವನದ ಆವರಣದಲ್ಲಿ ಶನಿವಾರ ಉಪಾಹಾರ ಸೇವಿಸಿ ಚಾಲನೆ ನೀಡಿದರು.

ನಂತರಮಾತನಾಡಿದ ಅವರು, ಸಂಜೀವಿನಿ ಒಕ್ಕೂಟದ ವತಿಯಿಂದ ಹಣಕಾಸು ನೆರವನ್ನು ಪಡೆದು ಗ್ರಾಮೀಣ ಭಾಗದ ಮಹಿಳೆಯರು ಮೊಬೈಲ್ ಕ್ಯಾಂಟೀನ್ ಮಾಡಲು ಮುಂದೆ ಬಂದಿರುವುದು ಖುಷಿಯ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಗ್ರಾಮೀಣ ಮಹಿಳೆಯರು ಮುಂದೆ ಬಂದಲ್ಲಿ ಬಡತನ ನಿವಾರಣೆ ಮಾಡಬಹುದಾಗಿದೆ. ಅಲ್ಲದೇ ಯಾವುದೇ ಸರ್ಕಾರಿ ಕಚೇರಿಯ ಸಭೆ, ಸಮಾರಂಭಗಳಲ್ಲಿ ಮೊಬೈಲ್ ಕ್ಯಾಂಟೀನ್ ನಡೆಸುವ ಮಹಿಳೆಯರಿಗೆ ಅವಕಾಶ ನೀಡಬೇಕು ಎಂದರು.

ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಮಾತನಾಡಿ, ಆರೋಗ್ಯ ಮತ್ತು ಶುಚಿತ್ವದ ಬಗ್ಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟು ಉತ್ತಮ ಗುಣಮಟ್ಟದ ಉಪಾಹಾರ ತಯಾರಿಸಿ ಎಂದರು. ಜಿ.ಪಂ.ಸಿಇಒಫೌಜಿಯಾ ತರುನ್ನಮ್ ಅವರು ಮಾತನಾಡಿ, ಮಿಷನ್@35 ಅಡಿಯಲ್ಲಿ ಪ್ರತಿ ತಾಲ್ಲೂಕಿನಲ್ಲಿ 5 ವಿಭಿನ್ನ ಚಟುವಟಿಕೆಗಳನ್ನು ಅನುಷ್ಠಾನ ಮಾಡಲು ಯೋಜನೆ ರೂಪಿಸಲಾಗಿತ್ತು. ಅದರಂತೆ ತಾಲ್ಲೂಕಿನ ಹಾಲವರ್ತಿ ಗ್ರಾಪಂನ ಸ್ವ-ಸಹಾಯ ಗುಂಪಿನ ಮಹಿಳೆಯರಿಂದ ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸಲಾಗುತ್ತಿದೆ ಎಂದರು.

ಈ ಮಹಿಳೆಯರು ಕ್ಯಾಂಟೀನ್ ಮಾಡಲು ಮುಂದೆ ಬಂದಿರುವುದು ತುಂಬಾ ಖುಷಿಯ ವಿಚಾರ. ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ಮೊಬೈಲ್ ಕ್ಯಾಂಟೀನ್‌ ಅನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗಲು ಸಲಹೆ ನೀಡಿ, ಬೇರೆ ಒಕ್ಕೂಟಗಳಿಂದ ಸಂಜೀವಿನಿ ಕೆಫೆ, ಹೈವೆ ಹಬ್, ಸ್ಯಾನಿಟರ್ ಪ್ಯಾಡ್ ಘಟಕ ಇತ್ಯಾದಿಗಳನ್ನು ಅನುಷ್ಠಾನ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.

ತಾ.ಪಂಅಧಿಕಾರಿ ಕೆ.ಎಂ ಮಲ್ಲಿಕಾರ್ಜುನ್ ಮಾತ ನಾಡಿದರು.ಪ್ರೊಬೇಷನರಿಐಎಎಸ್ ಅಧಿಕಾರಿ ಹೇಮಂತ್ ಕುಮಾರ್,ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಜಿ.ಪಂ. ಉಪಕಾ ರ್ಯದರ್ಶಿ ಶರಣಬಸವರಾಜ, ಯೋಜ ನಾ ನಿರ್ದೇಶಕ ಟಿ.ಕೃಷ್ಣಮೂರ್ತಿ, ತಾ.ಪಂ. ಸಹಾಯಕ ನಿರ್ದೇಶಕಿ ಕೆ.ಸೌಮ್ಯ, ಸಂಜೀವಿನಿ ಯೋಜನೆಯ ವ್ಯವಸ್ಥಾಪಕ ಸಂಗಮೇಶ ಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT