ಕನಕಗಿರಿ: ಪಂಚ ರಾಜ್ಯಗಳ ಚುನಾವಣೆಯ ವೇಳೆ ಸಾಕಷ್ಟು ದಾಸ್ತಾನಿದೆ. ಜನ ಗಾಬರಿಗೊಳ್ಳಬೇಡಿ ಎಂದು ಘಂಟಾಘೋಷವಾಗಿ ಹೇಳುತ್ತಿದ್ದ ಮೋದಿ ಸರ್ಕಾರ ಚುನಾವಣೆಯ ಫಲಿತಾಂಶ ಬಂದ ವಾರದಲ್ಲಿಯೇ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿ, ಜನರ ಬೆನ್ನು ಮುರಿದಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ ವಾದಿ) ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್ ಖಂಡಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿದ್ದು, ದರ ಏರಿಕೆಯಂತಹ ದೊಡ್ಡ ಜನವಿರೋಧಿ ನಡೆ ಬೇರೆಯಿಲ್ಲ. ಅಮೆರಿಕ-ಇಸ್ರೇಲ್ ದೇಶಗಳ ದುರಾಕ್ರಮಣದಿಂದ ಹಲವೆಡೆ ಬಿಕ್ಕಟ್ಟು ಸೃಷ್ಟಿಯಾಗಿದೆ. ಯುದ್ಧೋನ್ಮಾದ ರಾಷ್ಟ್ರಗಳ ವಿರುದ್ಧ ನಿಂತು ಇತರ ರಾಷ್ಟ್ರಗಳೊಂದಿಗೆ ಕೈಜೋಡಿಸಿ ಯುದ್ಧ ನಿಲ್ಲಿಸಲು ಯತ್ನಿಸಬೇಕಿತ್ತು. ಆದರೆ ಮೋದಿಯವರು ಅಮೆರಿಕದ ಹಿಂಬಾಲಕ ನಾಯಕನಾಗಿ, ಇಸ್ರೇಲ್ ದೇಶವನ್ನು ‘ತಂದೆ ರಾಷ್ಟ್ರ’ ಎಂಬ ಅಸಂಬದ್ಧ ಜಪ ಮಾಡಿ, ನೇತನ್ಯಾಹುವನ್ನು ತಬ್ಬಿಕೊಂಡು ಹಾಸ್ಯಾಸ್ಪದವಾಗಿದ್ದಾರೆ ಎಂದಿದ್ದಾರೆ.

ಇದು ಜಾಗತಿಕವಾಗಿ ದಕ್ಷಿಣದ ದೇಶಗಳ ನಾಯಕತ್ವಕ್ಕೆ ಕಳಂಕ ತಂದಿದೆ. ಅನೇಕ ದೇಶಗಳು ತಮ್ಮ ನಾಗರಿಕರ ಹಿತರಕ್ಷಣೆಗಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದ್ದರೆ, ದೇಶದಲ್ಲಿ ಅಂತಹ ಕ್ರಮಕೈಗೊಳ್ಳದೆ, ದುಡಿಯುವ ಜನರ ಮತ್ತು ಜನಸಾಮಾನ್ಯರ ಬದುಕಿನ ಮೇಲೆ ಹೊರೆ ಹೆಚ್ಚಿಸುವ ಕೆಲಸವನ್ನು ಬಿಜೆಪಿ ನೇತೃತ್ವದ ಸರ್ಕಾರ ಮಾಡಿದೆ ಎಂದು ತಿಳಿಸಿದ್ದಾರೆ.

ಜನಹಿತಕ್ಕಿಂತ ಬಿಜೆಪಿಗೆ ಮತ್ತೆ ಮತ್ತೆ ಚುನಾವಣೆ ಗೆಲ್ಲುವುದೇ ಮುಖ್ಯ ಎಂಬುದು ಮತ್ತೊಮ್ಮೆ ರುಜುವಾತಾಗಿದೆ. ಜನರಿಗೆ ಮಿತವ್ಯಯದ ಪಾಠ ಮಾಡಿದ ಮೋದಿ, ಮರುದಿನವೇ ರೋಡ್ ಶೋ ಮತ್ತು ಏರ್ ಶೋಗಳಲ್ಲಿ ಪಾಲ್ಗೊಂಡು ದೇಶದ ಜನರನ್ನು ಅವಹೇಳನ ಮಾಡುತ್ತಿದ್ದಾರೆ. ದರ ಏರಿಕೆ ಮಾಡುವ ಬದಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆಗಳನ್ನು ಕಡಿತಗೊಳಿಸಬೇಕಾಗಿತ್ತು. ಹೊರೆಯನ್ನು ಜನರ ಮೇಲೆ ಹಾಕಬಾರದಿತ್ತು ಎಂದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-35-1435489467

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.