ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಪಕ್ಷಗಳಿಗೆ ಹಣ, ಜಾತಿಯೇ ಮುಖ್ಯ; ಚೇತನ್‌

Last Updated 8 ಜನವರಿ 2023, 5:50 IST
ಅಕ್ಷರ ಗಾತ್ರ

ಕೊಪ್ಪಳ: ಈಗಿನ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಜಾತಿ ಮತ್ತು ಹಣದ ಪ್ರಭಾವವೇ ಮುಖ್ಯವಾಗಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿಯ ರಾಜಕಾರಣಿಗಳು ರಾಜಕಾರಣವನ್ನು ಉದ್ಯಮವಾಗಿ ಮಾಡಿಕೊಂಡಿದ್ದಾರೆ ಎಂದು ನಟ ಚೇತನ್‌ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಸಿನಿಮಾ ರಂಗ ವ್ಯಾಪಾರವಾಗಿದೆ. ಸಾಮಾಜಿಕ ಕಳಕಳಿ ಹಾಗೂ ಸಮಾಜದಿಂದ ಪಡೆದು ಸಮಾಜಕ್ಕೆ ಏನನ್ನಾದರೂ ಕೊಡಬೇಕು ಎನ್ನುವ ಕಾಳಜಿ ಎಲ್ಲರಿಗೂ ಇರಬೇಕು. ಹೆಚ್ಚು ಹಣ ಪಡೆಯುವ ಕಲಾವಿದರು ಅಲೆಮಾರಿಗಳು ಹಾಗೂ ದೇವದಾಸಿಯರ ಜೀವನ ಭದ್ರತೆಗೆ ಆದ್ಯತೆ ವಹಿಸಬೇಕು’ ಎಂದು ಆಗ್ರಹಿಸಿದರು.

‘ಹಂಸಲೇಖರ ವಿಷಯದಲ್ಲಿಯೂ ಸಿನಿಮಾ ರಂಗ ಅವರ ಪರವಾಗಿ ನಿಲ್ಲಲಿಲ್ಲ. ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿ ಅಲೆಮಾರಿ ಜನಾಂಗದ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಭ್ರಷ್ಟಾಚಾರ ತೊಡೆದು ಹಾಕಬೇಕು. ಇದನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ರಾಜಕಾರಣಿಗಳಲ್ಲಿ ಪರಿವರ್ತನೆ ಆಗಬೇಕಾಗಿದೆ. ಲೋಕಾಯುಕ್ತದ ಬಲ ಕುಂದಿಸಿದ ಸಿದ್ದರಾಮಯ್ಯ ಅವರ ಕ್ರಮ ಯಾವತ್ತಿಗೂ ಅವರಿಗೆ ಕಪ್ಪುಚುಕ್ಕೆಯೇ ಆಗಿರುತ್ತದೆ’ ಎಂದರು.

‘ಆದಾನಿಗೆ ಪ್ರಧಾನಿ ನರೇಂದ್ರ ಮೋದಿ ಸಂಪರ್ಕ ಇದ್ದು, ಕಾರ್ಪೊರೇಟ್‌ ಕಂಪನಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಬಿಜೆಪಿಗೆ ಹಿಂದೂತ್ವದ ನಿಖರ ಅಜೆಂಡಾ ಇದ್ದು, ಕಾಂಗ್ರೆಸ್‌, ಜೆಡಿಎಸ್‌ ಮತ್ತು ಎಎಪಿ ಅವರಿಗೆ ಯಾವ ಅಜೆಂಡಾವೂ ಇಲ್ಲ. ನಾನು ಎಲ್ಲ ರೀತಿಯ ಹಿಂಸೆಯನ್ನು ವಿರೋಧಿಸುತ್ತೇನೆ. ಧರ್ಮದ ಪರವಾಗಿದ್ದೇನೆ ಎನ್ನುವುದು ಸಹ ಭಯೋತ್ಪಾದನೆಯೇ. ಅಮೆರಿಕದ ಮಾನವ ಹಕ್ಕು ನಾಶ ಮಾಡುವ ದೊಡ್ಡ ಭಯೋತ್ಪಾದಕ ನಾನು ಕರ್ನಾಟಕದವೇ ನನ್ನ ಆಯ್ಕೆ’ ಎಂದರು.

‘ಭಾರತದ ನಾಗರಿಕತೆ ನನಗೆ ಬೇಕಿಲ್ಲ. ಈ ದೇಶದಲ್ಲಿ ಮತ ಹಾಕುವ ಹಕ್ಕು ಇಲ್ಲ ಎನ್ನುವ ಕಾರಣಕ್ಕೆ ಇಲ್ಲಿನ ಸಮಸ್ಯೆಗಳನ್ನು ಪ್ರಶ್ನಿಸಬಾರದು ಎನ್ನುವುದು ಸರಿಯಲ್ಲ. ನಾನು ಚುನಾವಣೆಗೆ ನಿಲ್ಲುವುದಿಲ್ಲ. ಹೀಗಾಗಿ ಇಲ್ಲಿನ ನಾಗರಿಕತ್ವ ಬೇಕಿಲ್ಲ’ ಎಂದರು.

‘ಬಸವಣ್ಣನವರ ಕ್ರಾಂತಿಯಲ್ಲಿ ಅಲೆಮಾರಿಗಳ ಪಾತ್ರವಿದೆ. ಆರೋಗ್ಯ ತಪ್ಪಿದ ಕಾರಣಕ್ಕೆ ದೇವದಾಸಿಯನ್ನಾಗಿ ಬಿಟ್ಟಿದ್ದಾರೆ
ಅಲೆಮಾರಿಗಳು ಕಷ್ಟದಲ್ಲಿದ್ದಾರೆ ಎನ್ನುವುದನ್ನು ತೊಡೆದು ಹಾಕಬೇಕು. ದೇವದಾಸಿಯರಿಗೆ 2018ರ ಪುನರ್ವಸತಿ ಕಾಯ್ದೆ ಜಾರಿಯಾಗಬೇಕು. ಅವರ ಕುರಿತು ಮರು ಸರ್ವೆ ಆಗಬೇಕು. ₹5000 ಮಾಸಾಶನ ಕೊಡಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT