ಮುದ್ದಲಗುಂದಿ: ಕೆರೆಯ ಹೂಳನ್ನು ಕೆರೆಗೆ ಚೆಲ್ಲಿ!

7
ಅಸಮರ್ಪಕ ಕೆರೆ ಹೂಳೆತ್ತುವ ಕಾಮಗಾರಿ; ಗ್ರಾಮಸ್ಥರ ಆರೋಪ

ಮುದ್ದಲಗುಂದಿ: ಕೆರೆಯ ಹೂಳನ್ನು ಕೆರೆಗೆ ಚೆಲ್ಲಿ!

Published:
Updated:
Deccan Herald

ತಾವರಗೇರಾ: ಸಮೀಪದ ಮುದ್ದಲಗುಂದಿ ಕೆರೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆರೆ ಹೂಳೆತ್ತುವ ಕಾಮಗಾರಿ ಕೆಲಸ ನಡೆದಿದ್ದು,  ಹೂಳಿನ ಮಣ್ಣುನ್ನು ಹೊರ ಪ್ರದೇಶಕ್ಕೆ ಸಾಗಿಸದೆ ಕೆರೆಯ ಪಕ್ಕದಲ್ಲಿಯೇ ಸುರಿಯುತ್ತಿರುವುರಿಂದ ಹೂಳು ಮತ್ತೆ ಕೆರೆ ಸೇರಲಿದೆ.

ಶಿರಗುಂಪಿ–ಜುಮಲಾಪುರ ಗ್ರಾಮ ಪಂಚಾಯಿತಿಯು 2018-19ನೇ ಸಾಲಿನ ನರೇಗಾ ಯೋಜನೆಯಡಿ.... ..........ವೆಚ್ಚದಲ್ಲಿ  ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, 450 ರಿಂದ 550 ಕೂಲಿ ಕಾರ್ಮಿಕರು ಕಳೆದ ಒಂದು ತಿಂಗಳಿಂದ ಹೂಳೆತ್ತುವ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ ಎತ್ತಿದ ಹೂಳನ್ನು ಕೆರೆಯ ಅಂಗಳ ಮತ್ತು ಕೆರೆಗೆ ನೀರು ಹರಿದು ಬರುವ ಜಾಗದಲ್ಲಿ ಹಾಕುತ್ತಿರುವುದರಿಂದ ಕೆರೆಯ ಮಣ್ಣನ್ನು ಕೆರೆಗೆ ಚೆಲ್ಲಿದಂತಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸಂಬಂಧಿಸಿದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಕಾಮಗಾರಿಯನ್ನು ಪರಿಶೀಲನೆ ಮಾಡಿಲ್ಲ. ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಂತರ್ಜಲ ಮಟ್ಟ ಹೆಚ್ಚಿಸಲು ಹಾಗೂ ಸ್ಥಳೀಯ ಕೂಲಿಕಾರರಿಗೆ ಕೆಲಸ ನೀಡಿ ಜನರ ಗುಳೆ ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದ ಮಹತ್ವಕಾಂಕ್ಷಿ ಉದ್ಯೋಗ ಖಾತ್ರಿ ಯೋಜನೆಯು ಇಂತಹ ಅಸಮರ್ಪಕ ಕಾಮಗಾರಿಯಿಂದ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !