ಯಲಬುರ್ಗಾ: ತಾಲ್ಲೂಕಿನ ಮುಧೋಳ ಭಾಗದಲ್ಲಿ ಗುಡುಗು ಮಿಶ್ರಿತ ಆಲಿಕಲ್ಲು ಮಳೆ ಸುರಿದಿದೆ. ಮಂಗಳವಾರ ರಾತ್ರಿ ಸುಮಾರು 7.30ರ ಹೊತ್ತಿಗೆ ಸುರಿಯಲು ಪ್ರಾರಂಭವಾದ ಮಳೆ ಅರ್ಧತಾಸು ಜೋರಾಗಿಯೇ ಸುರಿದಿದೆ. ಈ ಮಧ್ಯೆ ಆಲಿಕಲ್ಲುಗಳು ಬಿದ್ದಿದ್ದು ಕಂಡು ಬಂದಿದೆ.

ಮಧ್ಯಾಹ್ನದ ಹೊತ್ತಿನಲ್ಲಿ ಭಾರಿ ಬಿಸಿಲಿನ ತಾಪಮಾನ ಅಧಿಕವಾಗಿತ್ತು. ಸಂಜೆಯಾಗುತ್ತಿದ್ದಂತೆ ಮೋಡ ಕವಿದ ವಾತಾವರಣ ಉಂಟಾಗಿ ರಾತ್ರಿ ವೇಳೆ ಗುಡುಗು ಮಿಂಚು ಶುರುವಾಗಿ ಮಳೆ ಶುರವಾಗುತ್ತಿದ್ದಂತೆ ಆಲಿಕಲ್ಲು ಮಳೆ ಸುರಿದಿದೆ ಎಂದು ಗೊತ್ತಾಗಿದೆ. ಬಹಳ ವರ್ಷಗಳಿಂದ ಗ್ರಾಮದಲ್ಲಿ ಆಲಿಕಲ್ಲು ಮಳೆ ಸುರಿದಿರಲಿಲ್ಲ. ಈ ವರ್ಷದಲ್ಲಿ ಇದೇ ಮೊದಲು ಸುರಿದಿದೆ. ಬೇಸಿಗೆಯಲ್ಲಿಯೇ ಮಳೆ ಶುರುವಾಗಿದೆ. ಈ ಮಳೆಯಿಂದ ವಾತಾವರಣ ತಂಪಾಗಿದೆ ಎಂದು ಗ್ರಾಮದ ನಿವಾಸಿ ಹುಸೇನ ಮೋತಿಖಾನ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-35-814407064

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.