ಶುಕ್ರವಾರ, ಆಗಸ್ಟ್ 6, 2021
25 °C

ಮುನಿರಾಬಾದ್: ಇಬ್ಬರಿಗೆ ಕೋವಿಡ್-19 ಸೋಂಕು ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುನಿರಾಬಾದ್: ಇಲ್ಲಿನ ಹುಲಿಗಿ ಗ್ರಾಮದಲ್ಲಿ ಒಬ್ಬರಿಗೆ ಮತ್ತು ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮುನಿರಾಬಾದ್ ಆರ್.ಎಸ್.(ರೈಲ್ವೆ ಸ್ಟೇಷನ್) ಪ್ರದೇಶದಲ್ಲಿ ಒಬ್ಬರಿಗೆ ಕೋವಿಡ್ ದೃಡಪಟ್ಟಿದೆ.

ದೇವಸ್ಥಾನ ರಸ್ತೆಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ 65 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು ಶುಕ್ರವಾರ ಬೆಳಿಗ್ಗೆ ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಇನ್ನೊಬ್ಬ ವ್ಯಕ್ತಿ 38 ವರ್ಷದ ತೋರಣಗಲ್‍ನ ಜಿಂದಾಲ್ ಕಂಪನಿಯ ನೌಕರನಾಗಿದ್ದು, ಮುನಿರಾಬಾದ್ ಆರ್.ಎಸ್.(ರೈಲ್ವೆ ಸ್ಟೇಷನ್) ಪ್ರದೇಶದ ಗಂಗಾಪರಮೇಶ್ವರಿ ಕಾಲೊನಿಯಲ್ಲಿ ಪತ್ನಿ, ಮಕ್ಕಳ ಸಮೇತ ವಾಸವಿದ್ದಾರೆ.

ಇಲ್ಲಿನ ಗ್ರಾಮ ಪಂಚಾಯಿತಿ ಆವರಣದಲ್ಲಿ ಅಧಿಕಾರಿಗಳು ಟಾಸ್ಕ್‍ಫೋರ್ಸ್ ಸಮಿತಿಯ ತುರ್ತುಸಭೆ ನಡೆಸಿ, ಜನರು ಸುರಕ್ಷತೆ ಕುರಿತು ಚರ್ಚೆ ನಡೆಸಿದರು.

ಹುಲಿಗೆಮ್ಮ ದೇವಿ ದರ್ಶನಕ್ಕೆ ಬರುವ ಭಕ್ತರು ದೇಗುಲಕ್ಕೆ ಬರಬಾರದು. ತಮ್ಮ ತಮ್ಮ ಮನೆಯಲ್ಲಿಯೇ ದೇವಿಗೆ ಪೂಜೆ ಸಲ್ಲಿಸಬೇಕು ಎಂದು ಪಿಡಿಒ ಸಜ್ಜನರ ಪ್ರಕಾಶ್ ಭಕ್ತರಲ್ಲಿ ಮನವಿ ಮಾಡಿದರು.

ತಹಶೀಲ್ದಾರ ಜೆ.ಬಿ.ಮಜ್ಜಿಗಿ, ಉಪ ತಹಶೀಲ್ದಾರ್ ರೇಖಾದೀಕ್ಷಿತ್, ಸಿಪಿಐ ರವಿ ಉಕ್ಕುಂದ, ತಾಲ್ಲೂಕು ಪಂಚಾಯಿತಿ ಸದಸ್ಯ ಪಾಲಾಕ್ಷಪ್ ಪಗುಂಗಾಡಿ ಮತ್ತು ಸಮಿತಿಯ ಅಧ್ಯಕ್ಷರು, ವೈದ್ಯಾಧಿಕಾರಿ ಡಾ.ಶಫಿವುಲ್ಲಾ, ಗ್ರಾಮ ಪಂಚಾಯಿತಿ ಸದಸ್ಯರು, ಗಣ್ಯರು ಪಾಲ್ಗೊಂಡಿದ್ದರು.

ಸೋಂಕಿತರು ವಾಸಿಸುತ್ತಿರುವ ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು