ಮುನಿರಾಬಾದ್: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ(ಎಂ.ಗುರುಮೂರ್ತಿ ಬಣ) ಹೋಬಳಿ ಘಟಕವನ್ನು ಸೋಮವಾರ ಹುಲಿಗಿಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಉದ್ಘಾಟನೆ ಮಾಡಲಾಯಿತು.

ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ‘ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ನಿವೃತ್ತ ಸೈನಿಕ ಸಂಜೀವ ತೋಟಗಂಟಿ ಮಾತನಾಡಿ, ‘ಸಮುದಾಯದ ಅಭಿವೃದ್ಧಿಗೆ ಸಂಘಟನೆ ಮುಖ್ಯ. ಅದು ದುರುಪಯೋಗವಾಗದಂತೆ ನೋಡಿಕೊಳ್ಳಿ. ಪ್ರಜಾಪ್ರಭುತ್ವದಲ್ಲಿ ಅನ್ಯಾಯ ನಡೆದಾಗ ಎಲ್ಲರಿಗೂ ಪ್ರಶ್ನಿಸುವ ಹಕ್ಕಿದೆ. ಈ ಹಕ್ಕು, ಧೈರ್ಯ ಮತ್ತು ತಿಳಿವಳಿಕೆ ಶಿಕ್ಷಣದಿಂದ ಮಾತ್ರ ಬರಲು ಸಾಧ್ಯ. ಎಲ್ಲರೂ ಶಿಕ್ಷಣ, ಸಂಸ್ಕಾರ ಪಡೆದು ಅಭಿವೃದ್ಧಿ ಹೊಂದಲು ಸಹಕರಿಸಬೇಕು’ ಎಂದು ಹೇಳಿದರು.

ಸಂಘಟನೆಯ ಜಿಲ್ಲಾ ಸಂಚಾಲಕ ಶಿವಣ್ಣಹಟ್ಟಿ ಮಾತನಾಡಿ, ‘80ರ ದಶಕದಲ್ಲಿ ಈ ಭಾಗ ಭೂಮಿ ಹಕ್ಕು ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಸಂಘಟನೆಯ ಹೋರಾಟದ ನೆಲವಾಗಿತ್ತು. ಅಂಬೇಡ್ಕರ್ ಅವರು, ಚಳವಳಿಯನ್ನು ಹಿಂದಕ್ಕೆ ಎಳೆಯಬೇಡಿ, ಸಾಧ್ಯವಾದರೆ ಮುಂದಕ್ಕೆ ಎಳೆದುಕೊಂಡು ಹೋಗಿ ಇಲ್ಲದಿದ್ದರೆ ಅಲ್ಲೇ ಬಿಡಿ, ಮುಂದಿನ ಪೀಳಿಗೆ ಹೋರಾಟವನ್ನು ಮುಂದುವರಿಸುತ್ತಾರೆ ಎಂದು ಹೇಳಿದ್ದಾರೆ. ಅವರ ಜಯಂತಿಯನ್ನು ವಿಶ್ವಸಂಸ್ಥೆಯಲ್ಲೂ ಕೂಡ ಆಚರಿಸಲಾಗುತ್ತಿದೆ. ಇದು ನಮ್ಮ ದೇಶದ ಹೆಗ್ಗಳಿಕೆ. ಎಲ್ಲ ವರ್ಗದ ಮಹಿಳೆಯರಿಗೂ ಸಮಾನತೆಯ ಹಕ್ಕು ನೀಡುವ ಚಿಂತನೆಯನ್ನು ಅವರು ಹೊಂದಿದ್ದರು’ ಎಂದು ಹೇಳಿದರು.

ಉದ್ಯಮಿ ಎಚ್.ಅನಂತ ಮಾತ ನಾಡಿ, ‘ಡಾ.ಅಂಬೇಡ್ಕರ್ ಅವರ ಮೂರು ತತ್ವ ಶಿಕ್ಷಣ, ಸಂಘಟನೆ, ಹೋರಾಟ ಇದರ ಮೂಲಕ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮುಂದೆ ಬರಲು ಸಮುದಾಯ ಪ್ರಯತ್ನಿಸಬೇಕು’ ಎಂದು ಹೇಳಿದರು.

ರಾಷ್ಟ್ರೀಯ ಸಂಘಟನಾ ಸಂಚಾಲಕ ರಾಜಾಸಾಬ್ ಬಾಳೆಕಾಯಿ, ಸಂಚಾಲಕ ಸುರೇಶ ಕಟಗಿ, ಗಣ್ಯರಾದ ಹುಲೂಗಪ್ಪ ಬಾಳೆಕಾಯಿ, ಸೋಮನಾಥ ಕಲಾಲ್, ಅಮೀರ್ ಭಾಷಾ ಇತರರು ಹಾಜರಿದ್ದರು. ಫಕ್ರುದ್ದೀನ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-35-176020347

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.