ಮುನಿರಾಬಾದ್: ಕಲ್ಯಾಣ ಕರ್ನಾಟಕ ಭಾಗದ ಧಾರ್ಮಿಕ ಶ್ರದ್ಧಾ ಕೇಂದ್ರ, ಶಕ್ತಿಪೀಠ ಹುಲಿಗಿಯ ಹುಲಿಗೆಮ್ಮ ದೇವಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಎಲ್ಲಾ ಸಿದ್ಧತೆ ನಡೆದಿದ್ದು, ಭಾನುವಾರ ಸಂಜೆ 7 ಗಂಟೆಗೆ ಲಘುರಥೋತ್ಸವ (ಉಚ್ಚಾಯ ಉತ್ಸವ) ನಡೆಯಲಿದೆ.

ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಸಂಜೆ ನಡೆಯಲಿರುವ ಲಘು ರಥೋತ್ಸವಕ್ಕೆ ಹಾಗೂ ಸೋಮವಾರ ಸಂಜೆ ನಡೆಯಲಿರುವ ಮಹಾರಥೋತ್ಸವಕ್ಕೆ ಸಿದ್ಧತೆ ಪೂರ್ಣಗೊಂಡಿದೆ.

ಭಾನುವಾರ ಬೆಳಿಗ್ಗೆ 10.30ಕ್ಕೆ ಜಾತ್ರಾ ಮಹೋತ್ಸವದ ಅಂಗವಾಗಿ ಸುಮಾರು ಒಂದು ತಿಂಗಳ ಕಾಲ ನಡೆಯಲಿರುವ ‘ವಿಶೇಷ ದಾಸೋಹ’ ವ್ಯವಸ್ಥೆಗೆ ಚಾಲನೆ ದೊರೆಯಲಿದೆ. ಭಕ್ತರು ಪುಣ್ಯ ಸ್ನಾನ ಕೈಗೊಳ್ಳುವ ತುಂಗಭದ್ರಾ ನದಿ ಪಾತ್ರದಲ್ಲಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆದ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದೆ.

ಸೋಮವಾರ ಮಹಾ ರಥೋತ್ಸವ: ಹುಲಿಗೆಮ್ಮ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವದ ಅತಿ ಮುಖ್ಯ ಕಾರ್ಯಕ್ರಮ ಮಹಾರಥೋತ್ಸವ. ಅಂದು ರಾಜ್ಯದ ವಿವಿಧ ಜಿಲ್ಲೆ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯದಿಂದಲೂ ದೇವಿಯ ಭಕ್ತರು ಬರುತ್ತಾರೆ. ಸೋಮವಾರ ಒಂದೇ ದಿನ ಸುಮಾರು 4-5ಲಕ್ಷ ಭಕ್ತರ ಭೇಟಿಯ ನಿರೀಕ್ಷೆ ಹೊಂದಲಾಗಿದೆ.

ಮಹಾ ದಾಸೋಹ: ದೇವಿಯ ಭಕ್ತರಿಗೆ ಅನುಕೂಲ ಕಲ್ಪಿಸಲು ಪ್ರಾಧಿಕಾರದ ವತಿಯಿಂದ ಮತ್ತು ದಾನಿಗಳು ನೀಡುವ ವಿಶಿಷ್ಟ ಖಾದ್ಯಗಳ ಜೊತೆ ದಾಸೋಹ ಕಾರ್ಯ ನಡೆಯಲಿದೆ. ಮಾದಲಿ, ಬೂಂದಿ ಲಾಡು, ಪಾಯಸ, ಅಣ್ಣ ಸಾಂಬಾರು, ಮಿರ್ಚಿ ಸೇರಿದಂತೆ ವಿವಿಧ ಖಾದ್ಯಗಳು ಭಕ್ತರನ್ನು ಸೆಳೆಯಲಿದೆ.

ಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡುವ ಜೊತೆ ಮಾಂಸಾಹಾರ ಬಳಕೆ ತಪ್ಪಿಸಲು ಪ್ರಾಧಿಕಾರ ವಿಶಿಷ್ಟ ದಾಸೋಹ ಹಮ್ಮಿಕೊಂಡಿದ್ದು, ಎಲ್ಲಾ ಭಕ್ತರು ದಾಸೋಹದಲ್ಲಿ ಪ್ರಸಾದ ಸ್ವೀಕರಿಸಲು ಮನವಿ ಮಾಡಿದೆ. ಭಕ್ತರ ಆರೋಗ್ಯದ ಹಿತ ದೃಷ್ಟಿಯಿಂದ ಶುದ್ಧ ಕುಡಿಯುವ ನೀರು ಪೂರೈಕೆಗೆ ಸಿದ್ಧತೆ ಮಾಡಿದ್ದು, 8-10 ಕಡೆ ಪ್ರಾಧಿಕಾರ ಮತ್ತು ಸಂಘ ಸಂಸ್ಥೆಗಳು ನೀರಿನ ಅರವಟಿಗೆಯನ್ನು ಆರಂಭಿಸಿವೆ.

ಭಾನುವಾರದ ಕಾರ್ಯಕ್ರಮ: ಬೆಳಿಗ್ಗೆ ಗೋವು ಪೂಜೆ, ಸಸಿ ನೆಡುವ ಕಾರ್ಯಕ್ರಮ ಹಾಗೂ ವಿಶೇಷ ದಾಸೋಹಕ್ಕೆ ಚಾಲನೆ, ಸಂಜೆ 7 ಗಂಟೆಗೆ ಲಘು ರಥೋತ್ಸವ ಜರುಗಲಿದೆ.

ಸೋಮವಾರದ ಕಾರ್ಯಕ್ರಮ: ಬೆಳಿಗ್ಗೆ ‘ಅಕ್ಕಿ ಪಡಿ’ ನಂತರ ದೇವಿಗೆ ವಿಶೇಷ ಪೂಜೆ, ಅಲಂಕಾರ ನಡೆಯಲಿದೆ. ಸಾರಿಗೆ ಮತ್ತು ಮುಜರಾಯಿ ಖಾತೆಯ ಸಚಿವರಾದ ರಾಮಲಿಂಗಾರೆಡ್ಡಿಯವರು ಈಗಾಗಲೇ ನಿರ್ಮಾಣವಾಗಿರುವ ‘ಅಮ್ಮ ವಸತಿ ಸಮುಚ್ಚಯ’ದ ಮೇಲ್ಭಾಗದಲ್ಲಿ 1ಮತ್ತು 2ನೇ ಮಹಡಿಯ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ. ಇದರಲ್ಲಿ ಶಾಸಕರು, ಸಂಸದರು, ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಂಜೆ 5:30 ಗಂಟೆಗೆ ಡೊಳ್ಳು ಸೇರಿದಂತೆ ವಿವಿಧ ವಾದ್ಯ ಮೇಳದ ಜೊತೆ ಸಂಭ್ರಮದ ಮಹಾರಥೋತ್ಸವ ಜರುಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.