ಮುನಿರಾಬಾದ್: ಸಮೀಪದ ಬೇವಿನಹಳ್ಳಿ ಗ್ರಾ.ಪಂ ಕೇಂದ್ರವಾಗಿದ್ದು, ಇಲ್ಲಿನ ಚರಂಡಿ ನೀರು ನೇರವಾಗಿ ನೀರಾವರಿ ಕಾಲುವೆ ಸೇರುತ್ತಿದ್ದು, ದುರ್ನಾತ ಬೀರುತ್ತಿದೆ. ಅಲ್ಲದೆ ಸ್ವಚ್ಛ ನೀರು ಹರಿಸಿದರೆ ಅದೂ ಕೂಡ ಕಲುಷಿತಗೊಳ್ಳುವ ಆತಂಕ ಎದುರಾಗಿದೆ.

ಗ್ರಾಮದ ಮೇಲ್ಭಾಗದಿಂದ ಹರಿದು ಬರುವ ಚರಂಡಿ ನೀರು ಹಳ್ಳಕ್ಕೆ ಹೋಗುವ ಮಾರ್ಗದಲ್ಲಿ ತುಂಗಭದ್ರಾ ಮೇಲ್ಮಟ್ಟದ ನೀರಾವರಿ ಕಾಲುವೆ ನಿರ್ಮಾಣವಾಗಿದೆ. ಚರಂಡಿ ನೀರು ಹಳ್ಳಕ್ಕೆ ಹರಿದುಹೋಗುವ ಮಾರ್ಗ ಮಧ್ಯೆ ಗಿಡಗಂಟೆ ಬೆಳೆದು, ಕಸ, ತ್ಯಾಜ್ಯ, ಕೊಳಚೆ ತುಂಬಿಕೊಂಡಿದೆ. ಇದರಿಂದ ನೀರು ಹಳ್ಳಕ್ಕೆ ಹರಿಯದೆ ನೇರವಾಗಿ ನೀರಾವರಿ ಕಾಲುವೆಗೆ ಹರಿಯುತ್ತಿದೆ. ಇದರಿಂದ ಹಾವು ಸೇರಿದಂತೆ ಕ್ರಿಮಿಕೀಟಗಳು ನಿವಾಸಿಗಳ ಮನೆಗೆ ನುಗ್ಗುತ್ತಿವೆ. ಮಾಲಿನ್ಯ ಉಂಟಾಗಿ ದುರ್ನಾತ ಬೀರುತ್ತಿದೆ.

ನಾಗರಿಕರ ಆರೋಗ್ಯ ರಕ್ಷಣೆ ಅಲ್ಲಿನ ಸ್ಥಳೀಯ ಪಂಚಾಯಿತಿಯ ಜವಾಬ್ದಾರಿಯಾಗಿದೆ. ಈ ಸಂಬಂಧ ಹಲವು ಬಾರಿ ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ಸಮಸ್ಯೆ ಪರಿಹಾರವಾಗುತ್ತಿಲ್ಲ ಎಂದು ನಿವಾಸಿಗಳು ದೂರಿದ್ದಾರೆ. ಪ್ರಮುಖರಾದ ಯಮನೂರಪ್ಪ ಮಡ್ಡಿ, ಹನುಮಂತಪ್ಪ ಮಾಸ್ತರ, ಹುಲುಗಪ್ಪ, ಬೆಳ್ಳಪ್ಪ ಕುರಿ, ಮಂಜುನಾಥ ಅಡಿಗಿ ಇತರರು ಸ್ವಚ್ಛತೆಗೆ ಆಗ್ರಹಿಸಿದ್ದಾರೆ.

ಪಿಡಿಒ ನಿಷ್ಕ್ರಿಯ: 10 ವರ್ಷಗಳವರೆಗೆ ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಆಗಿ ಸೇವೆ ಸಲ್ಲಿಸುತ್ತಿರುವ ಗೀತಾ ಕುಮಾರಿ ಅವರು ಸ್ವಚ್ಛತೆ ಸೇರಿದಂತೆ ಗ್ರಾಮದ ಅಭಿವೃದ್ಧಿಗೆ ಗಮನಹರಿಸುತ್ತಿಲ್ಲ. ನಾಗರಿಕರ ದೂರಿಗೂ ಸ್ಪಂದಿಸುತ್ತಿಲ್ಲ. ದಯವಿಟ್ಟು ಅವರನ್ನು ಬೇರೆ ಕಡೆ ವರ್ಗಾಯಿಸಬೇಕು ಎಂದು ಗ್ರಾಮಸ್ಥರು, ತಾ.ಪಂ ಇಒ ಅವರಿಗೆ ದೂರು ಸಲ್ಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-35-1322840235

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.