ಭಾನುವಾರ, ಸೆಪ್ಟೆಂಬರ್ 22, 2019
27 °C

ಪತಿ ಮೇಲೆ ಕೋಪ: ಮಗು ಕೊಂದ ತಾಯಿ

Published:
Updated:
Prajavani

ಕೊಪ್ಪಳ: ಪತಿಯ ಮೇಲಿನ ಕೋಪದಿಂದ ತನ್ನ 16 ತಿಂಗಳ ಗಂಡು ಮಗುವನ್ನು ತಾಯಿಯೇ ಉಸಿರುಗಟ್ಟಿಸಿ ಕೊಲೆ ಮಾಡಿದ ಘಟನೆ ಸೋಮವಾರ ಕಾರಟಗಿ ತಾಲ್ಲೂಕಿನ ಸೋಮನಾಳ ಗ್ರಾಮದಲ್ಲಿ ನಡೆದಿದೆ.

ಅಭಿನವ ಮೃತ ಮಗು. ಕವಿತಾ ಅಲಿಯಾಸ್ ಪ್ರತಿಮಾ (25) ಕೊಲೆ ಆರೋಪಿಯಾಗಿದ್ದು, ಪೊಲೀಸರು ಬಂಧಿಸಿದ್ದಾರೆ.

ವಿವರ: ‘ಪತಿ ಶಶಿಧರ, ಪತ್ನಿ ಕವಿತಾ ಜೊತೆ ಆಗಾಗ್ಗೆ ಜಗಳವಾಗುತ್ತಿತ್ತು. ಅವರು ಕೆಲಸಕ್ಕೆಂದು ಹೋದ ನಂತರ ಕವಿತಾ ಈ ಕೃತ್ಯ ನಡೆಸಿದ್ದಾಳೆ. ಶಶಿಧರ ಮನೆಗೆ ಬಂದ ನಂತರ ಪ್ರಕರಣ ಬೆಳಕಿಗೆ ಬಂದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

Post Comments (+)