ಗುರುವಾರ , ಜನವರಿ 27, 2022
21 °C
ಉಪನ್ಯಾಸಕ ಹನುಮಂತಪ್ಪ ಶಿರವಾರ ಹೇಳಿಕೆ

ಕುಷ್ಟಗಿ: ‘ಸಂಗೀತ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ‘ಸಮಾಜದಲ್ಲಿ ಸಂಗೀತವನ್ನು ಆಸ್ವಾದಿಸುವ ಮತ್ತು ಆರಾಧಿಸುವವರ ಸಂಖ್ಯೆ ಬಹಳಷ್ಟಿದೆ. ಅದರಲ್ಲೂ ಸುಗಮ ಸಂಗೀತ ಮತ್ತು ಜಾನಪದ ಪ್ರಕಾರಗಳಿಗೆ ಮನ ಸೋಲದವರೇ ಇಲ್ಲ. ಸಂಗೀತ ಮತ್ತು ಕಲಾವಿದರಿಗೆ ನೆರವು ನೀಡಿ ಪ್ರೋತ್ಸಾಹಿಸುವುದು ಸಮುದಾಯದ ಜವಾಬ್ದಾರಿಯೂ ಹೌದು’ ಎಂದು ಉಪನ್ಯಾಸಕ ಹನುಮಂತಪ್ಪ ಶಿರವಾರ ಹೇಳಿದರು.

ಇಲ್ಲಿಯ ಅನ್ನದಾನೇಶ್ವರ ಜ್ಯೂನಿಯರ್ ಕಾಲೇಜಿನಲ್ಲಿ ಈಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಿತದಲ್ಲಿ ಹಿರೇಮನ್ನಾಪುರದ ಪುಟ್ಟರಾಜ ಸಂಗೀತ ಕಲಾ ಟ್ರಸ್ಟ್‌ ವತಿಯಿಂದ ಏರ್ಪಡಿಸಿದ್ದ ಸುಗಮ ಸಂಗೀತ ಹಾಗೂ ಜನಪದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಂಗೀತ ಪರಿಕರಗಳು, ವಾದ್ಯಗಳನ್ನು ನುಡಿಸುವುದು, ಹಾಡುಗಾರಿಕೆಯಲ್ಲಿ ಕಲಿಯುವುದು ಬಹಳಷ್ಟಿರುತ್ತದೆ. ಹೊಸ ಪ್ರತಿಭೆಗಳು ಬೆಳೆಯಬೇಕು ಅದರ ಮೂಲಕ ಸಂಗೀತ ಕ್ಷೇತ್ರ ವಿಸ್ತಾರಗೊಳ್ಳುತ್ತದೆ ಎಂದರು.

ವೆಂಕಟೇಶ ಹೊಸಮನಿ ಮಾತನಾಡಿ, ಬದುಕಿನ ಯಶಸ್ವಿ ಮೆಟ್ಟಿಲುಗಳನ್ನು ಏರುವುದಕ್ಕೆ ಸಂಗೀತ ನೆರವಾಗುತ್ತದೆ. ಸಮಾಜದಲ್ಲಿ ಸಂಗೀತ ಕಲೆ ಮತ್ತು ಕಲಾವಿದರನ್ನು ಬೆಳೆಸುವ ಮನಸ್ಸುಗಳೂ ಇವೆ. ಕಲಾವಿದರಿಗೆ ಕಾರ್ಯಕ್ರಮ ನೀಡುವುದಕ್ಕೆ ಅವಕಾಶ ಕಲ್ಪಿಸುವ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದು ಸ್ತುತ್ಯಾರ್ಹ ಎಂದು ಹೇಳಿದರು.

ಕಲಾವಿದರಾದ ಪ್ರತಾಪಕುಮಾರ ಹಿರೇಮಠ ಸುಗಮ ಸಂಗೀತ, ಹಂಚಿನಾಳದ ಯುವರಾಜ ಹಿರೇಮಠ ಜಾನಪದ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ಮರಿಸ್ವಾಮಿ ಗುಡಗಲದಿನ್ನಿ ತಬಲಾ ಸಾಥ್‌ ನೀಡಿದರು. ನಾಗರಾಜ ಹಿರೇಮನ್ನಾಪುರ, ಶರಣಯ್ಯ ಹಿರೇಮಠ ಇತರೆ ಕಲಾವಿದರು, ಸಾರ್ವಜನಿಕರು, ವಿದ್ಯಾರ್ಥಿಗಳು ಭಾಗಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.