ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲ್ಲಾ ಕಾಲಕ್ಕೂ ಜಾನಪದ ಸಾಹಿತ್ಯ ಅನ್ವಯ’

Last Updated 8 ಫೆಬ್ರುವರಿ 2018, 19:33 IST
ಅಕ್ಷರ ಗಾತ್ರ

ಬೆಂಗಳೂರು: ‘ಜಾನಪದ ಸಾಹಿತ್ಯ ಎಲ್ಲಾ ಕಾಲಕ್ಕೂ ಅನ್ವಯವಾಗುತ್ತದೆ. ಜಗತ್ತು ಬದಲಾದರೂ ಜಾನಪದೀಯ ಸೊಗಡು, ಪರಂಪರೆ ಬದಲಾಗುವುದಿಲ್ಲ’ ಎಂದು ಜಾನಪದ ವಿದ್ವಾಂಸರಾದ ಡಾ. ವೀರಸಾಬಿಹಳ್ಳಿ ಶಿವಣ್ಣ ಅಭಿಪ್ರಾಯಪಟ್ಟರು.

ಪೀಣ್ಯ ದಾಸರಹಳ್ಳಿ ಬಳಿಯ ಸೈಂಟ್ ಕ್ಲಾರೆಟ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಜಾನಪದ ಸಾಹಿತ್ಯ ಮತ್ತು ವರ್ತಮಾನ’ ಒಂದು ದಿನದ ರಾಷ್ಟ್ರೀಯ ವಿಚಾರಣ ಸಂಕಿರಣದಲ್ಲಿ ಮಾತನಾಡಿದರು.

ಪ್ರಾಧ್ಯಾಪಕ ಡಾ.ಬ್ಯಾಡರಳ್ಳಿ ಶಿವರಾಜು, ‘ ಜಾನಪದ ಗೀತೆಗಳಲ್ಲಿ ಹಾಸ್ಯ, ಭೀಕರತೆ, ವಿಸ್ಮಯ, ಜೀವನ ಎಲ್ಲವೂ ಇರುತ್ತಿತ್ತು. ಹಳ್ಳಿಯಲ್ಲಿ ಮಹಿಳೆಯರು ಸೋಬಾನ, ಜಾನಪದ ಗೀತೆಗಳನ್ನು ಹಾಡುತ್ತಿದ್ದರು. ಅದರಲ್ಲಿ ನೀತಿಯ ಸಾರ ಸಾಕಷ್ಟಿರುತ್ತದೆ’ ಎಂದು ವಿವರಿಸಿದರು.

ಕೆಂಪು ಹೆಂಡತಿಯೆಂದು ಸುಮ್ಮಾಗೊಳಬೇಡ, ಹತ್ತಿಯ ಹಣ್ಣು ಅತಿಕೆಂಪು ನನಕಂದ, ಒಡೆದು ನೋಡಿದರೆ ಹುಳ ಬಾಳ... ಆಚಾರಕ್ಕೆ ಅರಸಾಗು, ನೀತೀಲಿ ಪ್ರಭುವಾಗು, ಮಾತಿನಲಿ ಚೂಡಾಮಣಿ ಯಾಗು ನನಕಂದ ಜ್ಯೋತಿಯೇ ಆಗು ಜಗಕ್ಕೆಲ್ಲಾ...

ಹೀಗೆ ಕೆಲವು ಜಾನಪದ ಗೀತೆಗಳನ್ನು ಹೇಳುತ್ತಾ ಅದರ ಸಾರವನ್ನು ತಿಳಿಸಿದರು. ಫೇಸ್‌ಬುಕ್, ವಾಟ್ಸ್‌ಅಪ್, ಜಾಲತಾಣಗ
ಳಲ್ಲಿ ಜಾನಪದ ಗೀತೆಗಳನ್ನು ಪ್ರಚಾರ ಮಾಡಬೇಕು ಎಂದು ಹೇಳಿದರು.

ಪ್ರಾಧ್ಯಾಪಕ ಡಾ.ಶಿವಣ್ಣ ತಿಮ್ಮಲಾಪುರ ಅವರು ಜಾನಪದ ಚರ್ಮವಾದ್ಯಗಳು ಮತ್ತು ವರ್ತಮಾನ ಕುರಿತು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT