ರಾಷ್ಟ್ರೀಯ ಹೆದ್ದಾರಿ ಬಂದ್‌ ಚಳವಳಿ ಇಂದು

7
39ನೇ ರೈತ ಹುತಾತ್ಮ ದಿನಾಚರಣೆ: 30 ಜಿಲ್ಲೆಯ ರೈತರು ಭಾಗಿ

ರಾಷ್ಟ್ರೀಯ ಹೆದ್ದಾರಿ ಬಂದ್‌ ಚಳವಳಿ ಇಂದು

Published:
Updated:

ಕೊಪ್ಪಳ: ರೈತರ ಸಂಪೂರ್ಣ ಸಾಲ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಸ್ವರಾಜ್ ಇಂಡಿಯಾ ಪಕ್ಷದಿಂದ ಹೆದ್ದಾರಿ ತಡೆ ಹಾಗೂ ರೈತರ ರಾಜ್ಯಮಟ್ಟದ ಬೃಹತ್ ಸಮಾವೇಶವನ್ನು ಜುಲೈ 21ರಂದು ತಾಲ್ಲೂಕಿನ ಹಿಟ್ನಾಳ್ ಕ್ರಾಸ್ ಬಳಿ ಹಮ್ಮಿಕೊಳ್ಳಲಾಗಿದೆ.

ರಾಷ್ಟ್ರೀಯ ಹೆದ್ದಾರಿಗಳನ್ನು 50 ಮತ್ತು 63 ಅನ್ನು ಬಂದ್ ಮಾಡಿ ರೈತರು ಚಳವಳಿ ಹಮ್ಮಿಕೊಂಡಿದ್ದು, ರಾಜ್ಯದ 30 ಜಿಲ್ಲೆಗಳ ರೈತ ಸಂಘಟನೆಯ ಪದಾಧಿಕಾರಿಗಳು, ರೈತ ಮುಖಂಡರು ಭಾಗವಹಿಸಲಿದ್ದಾರೆ.

ಜೆಡಿಎಸ್ ಚುನಾವಣಾ ಪೂರ್ವದಲ್ಲಿ ಅಧಿಕಾರಕ್ಕೆ ಬಂದ 24 ತಾಸಿನೊಳಗೆ ರೈತರ ಎಲ್ಲ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ₹ 2 ಲಕ್ಷಕ್ಕೆ ಸೀಮಿತಗೊಳಿಸಿ ಸಾಲ ಮನ್ನಾ ಮಾಡಿರುವುದು ರೈತರಿಗೆ ಅನ್ಯಾಯ ಮಾಡಿದ್ದಲ್ಲದೆ, ವಚನಭಷ್ಟರಾಗಿದ್ದಾರೆ ಎಂದು ಸಂಘದ ಅಧ್ಯಕ್ಷ ಕೆ.ಟಿ.ಗಂಗಾಧರ್‌, ಪ್ರಧಾನ ಕಾರ್ಯದರ್ಶಿ ಚಾಮರಸ ಮಾಲಿಪಾಟೀಲ ಆರೋಪಿಸಿದ್ದಾರೆ.

ಬೇಡಿಕೆಗಳೇನು?: ಮೊದಲ ಹಂತದಲ್ಲಿ ರೈತರು ಪಡೆದ ಎಲ್ಲ ಹಂತದ ಬೆಳೆ ಸಾಲ ಮನ್ನಾ, ಕೃಷಿ ಅಭಿವೃದ್ಧಿಗಾಗಿ ಟ್ರ್ಯಾಕ್ಟರ್, ಪಂಪ್‌ಸೆಟ್, ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ, ಕೃಷಿ ಯಂತ್ರೋಪಕರಣ ಖರೀದಿಗಾಗಿ ಬ್ಯಾಂಕಿನಲ್ಲಿ ಮಾಡಿರುವ ಸಾಲ ಮನ್ನಾ, ಸರಳ ಸಾಲ ನೀತಿ ರೂಪಿಸುವುದು, ಡಾ.ಸ್ವಾಮಿನಾಥನ್, ಗೋರಖ್ ಸಿಂಗ್ ವರದಿ ಜಾರಿಗೆ ತಂದು ತೆಂಗು, ಅಡಿಕೆ ಬೆಳೆಗಾರರಿಗೆ ರಕ್ಷಣೆ, ದಿವಂಗತ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿದ ಖಾಸಗಿ ಮಸೂದೆ ಅಂಶಗಳನ್ನು ಪರಿಗಣಿಸಿ ಯುವಕರು ಕೃಷಿ ಕ್ಷೇತ್ರದತ್ತ ಆಕರ್ಷಿತರಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವುದು ಸೇರಿದಂತೆ ಹಲವಾರು ವಿಷಯಗಳನ್ನು ಮುಂದೆ ಇಟ್ಟುಕೊಂಡು ಬೃಹತ್ ಚಳವಳಿ ಸಂಘಟಿಸಲಾಗಿದೆ ಎಂದು ಸಂಘಟನೆಯ ಮುಖಂಡರು ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಚುಕ್ಕಿ ನಂಜುಂಡಸ್ವಾಮಿ, ದರ್ಶನ ಪುಟ್ಟಣ್ಣಯ್ಯ, ನಂದಿನಿ ಜಯರಾಂ, ಕಲ್ಯಾಣರಾವ್ ಮುಚಳಂಬಿ, ನಾಗರತ್ನಮ್ಮ, ಅರೆಹಳ್ಳಿ ರಾಜೇಗೌಡ, ಜೆ.ಎಂ.ವೀರಸಂಗಯ್ಯ, ಕೆ.ಜಿ.ಶಾಂತಸ್ವಾಮಿ ಮಠ ಮುಂತಾದವರು ಭಾಗವಹಿಸಲಿದ್ದಾರೆ.

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !