ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಮಂತ್ರಾಲಯ ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶದಂತೆ ಭಾನುವಾರ ಜಯತೀರ್ಥರ ಅಷ್ಟೋತ್ತರ ಪಾರಾಯಣ ನಡೆಯಿತು.
ಶ್ರೀಮಠದ ಶಿಷ್ಯರಾದ ಸುಳಾದಿ ಹನುಮೇಶಾಚಾರ ಮಾತನಾಡಿ, ಪ್ರತಿ ತಿಂಗಳ ನವವೃಂದಾವನ ಗಡ್ಡೆಯಲ್ಲಿ ರಾಯರ ಮಠದಿಂದ ಅಷ್ಟೋತ್ತರ ಕಾರ್ಯಕ್ರಮ ನಡೆಯುವ ಆಚಾರವಿದೆ. ಈ ತಿಂಗಳು ಸಹ ವಿಶೇಷವಾಗಿ ಅಷ್ಟೋತ್ತರ ಕಾರ್ಯಕ್ರಮ ನಡೆಸಲಾಯಿತು ಎಂದರು.
ಶ್ರೀಮಠದ ಪಂಚಾಂಗಗಳಲ್ಲಿ ಅಷ್ಟೋತ್ತರ ಕಾರ್ಯಕ್ರಮ ಜರುಗಿಸುವ ಬಗ್ಗೆ ದಿನಾಂಕಗಳು ಮುದ್ರಿತವಾಗಿದ್ದು, ಅದರಂತೆ ಚಾಚುತಪ್ಪದೆ ಕಾರ್ಯಕ್ರಮ ನಡೆದಿದೆ. ಮುಂದಿನ ತಿಂಗಳ ಅಷ್ಟೋತ್ತರ ಕಾರ್ಯಕ್ರಮ ಸೆಪ್ಟೆಂಬರ್ 17ರಂದು ನಡೆಯಲಿದೆ ಎಂದರು.
ಆನೆಗೊಂದಿ ರಾಯರಮಠದ ವ್ಯವಸ್ಥಾಪಕ ಸುಮಂತ ಕುಲಕರ್ಣಿ ಮಾತಾನಾಡಿ, ಕಳೆದ ತಿಂಗಳ ನಡೆದ ಜಯತೀರ್ಥರ ಆರಾಧನೆ ಇನ್ನೂ ಮರೆತಿಲ್ಲ. ಅಷ್ಟೊಂದು ವೈಭವಯುತವಾಗಿ ಮಂತ್ರಾಲಯ ಮಠದ ಪೀಠಾಧಿಪತಿಗಳ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು ಎಂದರು.
ಗಂಗಾವತಿ ಸುಧೀಂದ್ರ ಕುಲಕರ್ಣಿ ನವಲಿ, ನರಸಿಂಹಚಾರ, ವಿಜೀಂದ್ರಚಾರ, ಗುರುರಾಜಚಾರ, ಗಿರೀಶ ದೇಸಾಯಿ ಯಲಬುರ್ಗ, ರಾಘವೇಂದ್ರ ದೇಸಾಯಿ ಸಿಂಧನೂರು ಸೇರಿ ಮಂತ್ರಾಲಯ ಸಂಸ್ಕ್ರತ ವಿದ್ಯಾಪೀಠದ ವಿದ್ವಾಂಸರ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.