ಕೊಪ್ಪಳ: ನಗರದ ಹಲಗೇರಿ ಗ್ರಾಮದ ಸಮೀಪದಲ್ಲಿರುವ ತವ ಪಂಜಾಬ್ ಹೊಟೇಲ್ ಮುಂಭಾಗದಲ್ಲಿ ಊಟಕ್ಕೆಂದು ನಿಲ್ಲಿಸಲಾಗಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ನಲ್ಲಿದ್ದ ₹97 ಲಕ್ಷ ಮೌಲ್ಯದ ಚಿನ್ನದ ಬ್ಯಾಗ್ ಬುಧವಾರ ರಾತ್ರಿ ದೋಚಲಾಗಿದೆ.

ಮಂಗಳೂರು ಮೂಲದ ಮಹಮ್ಮದ್ ಅಸ್ಗರ್ ಮತ್ತು ಇರ್ಷಾದ್ ಎಂಬುವರು ಸೂಪರ್ ಗೋಲ್ಡ್ ಅಂಡ್ ಡೈಮಂಡ್ಸ್ ಎನ್ನುವ ಸಗಟು ಚಿನ್ನಾಭರಣ ಅಂಗಡಿಯಲ್ಲಿ ಮಾರಾಟ ಪ್ರತಿನಿಧಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರೂ ಬಂಗಾರ ಮಾರಾಟಕ್ಕಾಗಿ ರಾಯಚೂರು ಜಿಲ್ಲೆಯ ಸಿಂಧನೂರಿಗೆ ಬಂದು ಅಲ್ಲಿಂದ ಮಂಗಳೂರಿಗೆ ವಾಪಸ್ ಹೋಗುವಾಗ ಮಾರ್ಗಮಧ್ಯದಲ್ಲಿ ಘಟನೆ ನಡೆದಿದೆ. ಈ ಬಸ್ ಕೊಪ್ಪಳ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿತ್ತು.

ಮಹಮ್ಮದ್ ಹಾಗೂ ಇರ್ಷಾದ್ ಸಿಂಧನೂರಿನಲ್ಲಿ ಆಭರಣದ ಅಂಗಡಿಯೊಂದರಲ್ಲಿ ಸುಮಾರು ಮೂರ್ನಾಲ್ಕು ತಾಸು ಕಳೆದಿದ್ದು ಅಲ್ಲಿ ಯಾವ ಬಸ್ನಲ್ಲಿ ವಾಪಸ್ ಹೋಗಬೇಕು ಎನ್ನುವುದರ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ವಿಷಯವನ್ನು ತಿಳಿದುಕೊಂಡ ನಾಲ್ಕು ಜನ ಆರೋಪಿಗಳ ಪೈಕಿ ಒಬ್ಬ ಚಿನ್ನದ ವ್ಯಾಪಾರಿಗಳು ಸಾಗಿದ ಬಸ್ನಲ್ಲಿಯೇ ತೆರಳಿದರೆ, ಇನ್ನು ಮೂವರು ಪ್ರತ್ಯೇಕ ವಾಹನದಲ್ಲಿ ಬಸ್ ಹಿಂಬಾಲಿಸಿಕೊಂಡು ಬಂದಿದ್ದಾರೆ. ಬಸ್ ಊಟಕ್ಕೆಂದು ನಿಲ್ಲಿಸಿದಾಗ ಬಂಗಾರ ಇದ್ದ ಬ್ಯಾಗ್ ಕದ್ದುಕೊಂಡು ಹೋಗಿದ್ದಾರೆ. ಬ್ಯಾಗ್ ತೆಗೆದುಕೊಂಡು ಹೋಗುವ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ.

ಬಂಗಾರ ಕಳೆದುಕೊಂಡ ಮಹಮ್ಮದ್ ಮತ್ತು ಇರ್ಷಾದ್ ಅವರನ್ನು ಪೊಲೀಸರು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.