ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಲ್ಲರೆ ಹಣದುಬ್ಬರ 4 ತಿಂಗಳ ಕನಿಷ್ಠಕ್ಕೆ

Last Updated 12 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಚಿಲ್ಲರೆ ಹಣದುಬ್ಬರವು ಫೆಬ್ರುವರಿ ತಿಂಗಳಲ್ಲಿ ನಾಲ್ಕು ತಿಂಗಳ ಹಿಂದಿನ ಕನಿಷ್ಠ ಮಟ್ಟವಾದ ಶೇ 4.44ಕ್ಕೆ ಇಳಿದಿದೆ.

ಆಹಾರ ‍ಪದಾರ್ಥಗಳು ಅಗ್ಗವಾಗಿರುವುದು ಮತ್ತು ಇಂಧನ ವೆಚ್ಚ ತಗ್ಗಿರುವುದೇ ಇದಕ್ಕೆ ಕಾರಣ. ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರವು ಜನವರಿ ತಿಂಗಳಲ್ಲಿ ಶೇ 5.07ರಷ್ಟಿತ್ತು. 2017ರ ಫೆಬ್ರುವರಿಯಲ್ಲಿ ಶೇ 3.65ರಷ್ಟು ದಾಖಲಾಗಿತ್ತು  ಹಿಂದಿನ ತಿಂಗಳ ಶೇ 4.7ಕ್ಕೆ ಹೋಲಿಸಿದರೆ, ಫೆಬ್ರುವರಿ ತಿಂಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಯು ಶೇ 3.26ರಷ್ಟಿತ್ತು. ತರಕಾರಿಗಳ ಹಣದುಬ್ಬರವು ಶೇ 27 ರಿಂದ ಶೇ 17ಕ್ಕೆ ಇಳಿದಿದೆ. ಹಾಲು ಮತ್ತು ಅದರ ಉತ್ಪನ್ನಗಳೂ ಅಗ್ಗವಾಗಿವೆ ಎಂದು ಕೇಂದ್ರೀಯ ಸಾಂಖ್ಯಿಕ ಕಚೇರಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT