ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಲ್ಲೇಖನ ವೃತದ ಮೂಲಕ ವೃದ್ಧೆ ದೇಹತ್ಯಾಗ

Published : 27 ಸೆಪ್ಟೆಂಬರ್ 2024, 13:28 IST
Last Updated : 27 ಸೆಪ್ಟೆಂಬರ್ 2024, 13:28 IST
ಫಾಲೋ ಮಾಡಿ
Comments

ಕೊಪ್ಪಳ: ನಗರದಲ್ಲಿ 16 ದಿನಗಳ ಹಿಂದೆ ಜೈನ ಧರ್ಮಿಯರ ಶ್ರೇಷ್ಠ ಹಾಗೂ ಕಠೋರವಾದ ಸಂಥಾರ ಸಂಲೇಖನಾ ವೃತ ಕೈಗೊಂಡಿದ್ದ ವೃದ್ಧೆ ಶುಕ್ರವಾರ ದೇಹತ್ಯಾಗ ಮಾಡಿದರು.

‘ಅನೇಕ ವರ್ಷಗಳಿಂದ ಇಲ್ಲಿಯೇ ವಾಸವಾಗಿದ್ದ ಶ್ವೇತಾಂಬರ ಜೈನ ಪರಂಪರೆಯ ಮಾಂಗೀಲಾಲ ಚೋಪ್ರಾ ಅವರ ಪತ್ನಿ ಭಾಗ್ಯವಂತಿದೇವಿ ಚೋಪ್ರಾ (78) ಸೆ. 11ರಂದು ಮಧ್ಯಾಹ್ನ 3.41ಕ್ಕೆ ಸಲ್ಲೇಖನ ವೃತ ಆರಂಭಿಸಿದ್ದರು. ಭಾಗ್ಯವಂತಿದೇವಿ ತಮ್ಮ ಜೀವನದ ಸಾಂಸಾರಿಕ ಸುಖಃ ದುಃಖಗಳನ್ನು ಎದುರಿಸಿ ಜೈನತ್ವದ ನಿಯಮಾವಳಿ ಪಾಲಿಸಿ ತ್ಯಾಗ, ಜಪ, ಅನೇಕ ದಾನಧರ್ಮ ಮಾಡಿದ್ದಾರೆ’ ಎಂದು ಅವರ ಸಂಬಂಧಿಕರಾದ ಮಹೇಂದ್ರ ಚೋಪ್ರಾ ತಿಳಿಸಿದರು. ಶುಕ್ರವಾರವೇ ಅಂತ್ಯಕ್ರಿಯೆ ನೆರವೇರಿತು.

‘ತಮ್ಮ ವೃದ್ಯಾಪದ ದಿನಗಳಲ್ಲಿ ಅವರು ಶಾರೀರಿಕ ಅನಾರೋಗ್ಯದಿಂದಾಗಿ ಕೊನೆಯ ಉಸಿರಿನ ತನಕ ಸ್ವಯಪ್ರೇರಣೆಯಿಂದ ಜೈನ ಸಂತ ಮುನಿವರ್ಯರ ಸನ್ನಿಧಿಯಲ್ಲಿ ಧರ್ಮಾರಾಧನೆಯಲ್ಲಿ ತೊಡಗಿದ್ದರು. ಇದು ಬದುಕಿನ ಕೊನೆಯ ಘಟ್ಟದ ಕಠೋರ ವೃತವಾಗಿದ್ದು, ಮನುಷ್ಯ ತನ್ನ ಸಂಪೂರ್ಣ ಆಯುಷ್ಯ ಕಳೆಯುವ ತನಕ ವೃತದಲ್ಲಿ ಕಳೆಯುವ ಆಚರಣೆಯಾಗಿದೆ. ವೃತ ಕೈಗೊಂಡವರು ಒಂದು ಹನಿ ನೀರನ್ನೂ ಕುಡಿಯುವುದಿಲ್ಲ. ಧರ್ಮದ ಆರಾಧನೆಯಲ್ಲಿ ಮಾತ್ರ ತೊಡಗಿರುತ್ತಾರೆ’ ಎಂದು ಮಹೇಂದ್ರ ಹಾಗೂ ಜೈನ್‌ ಸಮಾಜದ ಶ್ರೇಣಿಕ ಕುಮಾರ ಸುರಾಣಾ ಹೇಳಿದರು.

ಭಾಗ್ಯವಂತಿದೇವಿ ಚೋಪ್ರಾ ಸಲ್ಲೇಖನ ವೃತ ಕೈಗೊಂಡಾಗ ಜೈನ ಸಮಾಜದ ಅನೇಕರು ಅವರ ನಿವಾಸಕ್ಕೆ ಭೇಟಿ ನೀಡಿ ದರ್ಶನ ಪಡೆದು ಪೂಜೆ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT