ಮಂಗಳವಾರ, ಜೂನ್ 15, 2021
22 °C

ಆನ್‍ಲೈನ್‍ನಲ್ಲಿ ಮಗುವಿಗೆ ನಾಮಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ಲಾಕ್‍ಡೌನ್ ಕಾರಣಕ್ಕೆ ವಿಡಿಯೋ ಕಾಲ್ ಮೂಲಕವೇ ಮಗುವಿನ ನಾಮಕರಣ ಮಾಡಿದ ಘಟನೆ ಇಲ್ಲಿನ ಶಿವರಾಜ ಬಂಡಿಹಾಳ ಕುಟುಂಬದಲ್ಲಿ ಶುಕ್ರವಾರ ನಡೆದಿದೆ.

ಶಿವರಾಜ ಬಂಡಿಹಾಳ ಹಾಗೂ ಸುನೀಲ್ ಹಳ್ಳಿ ಅಳಿಯ, ಮಾವಂದಿರು. ಗದಗಿನಲ್ಲಿರುವ ಸುನೀಲ್ ಹಳ್ಳಿ ಹಾಗೂ ಸುಷ್ಮಾ ಹಳ್ಳಿ ಅವರ ಎರಡನೇ ಮಗಳ ನಾಮಕರಣವನ್ನು ಕೋವಿಡ್ ಲಾಕ್‍ಡೌನ್ ಕಾರಣಕ್ಕೆ ವಿಡಿಯೋ ಕಾಲ್‍ನಲ್ಲಿ ನಡೆಸಲು ನಿರ್ಧರಿಸಿದ್ದರು. ಅದರಂತೆ ಇಲ್ಲಿನ ಶಿವರಾಜ ಅವರ ಹಿರಿಯ ಪುತ್ರ ಚಿರಾಗ್ ಅವರು, ಮಗುವಿಗೆ ಆನ್‍ಲೈನ್ ಮೂಲಕ ನಾಮಕರಣ ಮಾಡಿದರು.

ಗದಗ ಹಾಗೂ ಹನುಮಸಾಗರದ ಬಂಧುಗಳು ಮೊಬೈಲ್ ಮೂಲಕವೇ ಸಾಕ್ಷಿಯಾಗಿ ಪರಸ್ಪರ ಶುಭಕೋರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.