ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಮಹಿಳಾ ಸಂಘಗಳ ನಂಬಿಕೆಯ ನಮ್ಮ ಜೀವಾಳ’

Published : 28 ಸೆಪ್ಟೆಂಬರ್ 2024, 15:54 IST
Last Updated : 28 ಸೆಪ್ಟೆಂಬರ್ 2024, 15:54 IST
ಫಾಲೋ ಮಾಡಿ
Comments

ಕೊಪ್ಪಳ: ‘ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಲ್ಲಿ ಎಲ್ಲವೂ ಪಾರದರ್ಶಕವಾಗಿದೆ.‌ ಇಲ್ಲಿಯ ಗುಂಪುಗಳಲ್ಲಿ ಪಾಲ್ಗೊಳ್ಳುವವರೆ ನಮ್ಮ ಜೀವಾಳ. ಅವರ ನಂಬಿಕೆಯನ್ನು ಎಂದು ಹಾಳು ಮಾಡಿಕೊಳ್ಳುವುದಿಲ್ಲ’ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಪ್ರಕಾಶರಾವ್ ಹೇಳಿದರು.

ನಗರದಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಮಟ್ಟದ ಒಕ್ಕೂಟ ಪದಾಧಿಕಾರಿಗಳ‌ ಸಮಾವೇಶದಲ್ಲಿ ಮಾತನಾಡಿದ ಅವರು ‘ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವಾವಲಂಬಿಯಾಗಲು ವೀರೇಂದ್ರ ಹೆಗ್ಗಡೆ ಅವರು ಅನ್ನಯ ಸೇವೆ ನೀಡಿದ್ದಾರೆ. ಇಲ್ಲಿ ವಾರ್ಷಿಕವಾಗಿ ಸ್ವಸಹಾಯ ಗುಂಪುಗಳಲ್ಲಿ ನಡೆಯುವ ಆರ್ಥಿಕ ವ್ಯವಹಾರ ಪಾರದರ್ಶಕ ಹಾಗೂ ಕಾನೂನಾತ್ಮಕವಾಗಿವೆ’ ಎಂದರು.

ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್‌ ಪಟೇಲ್‌ ಕಾರ್ಯಕ್ರಮ ಉದ್ಘಾಟಿಸಿ ‘ಧರ್ಮಸ್ಥಳದ ಸಂಘದಲ್ಲಿ ಮಹಿಳೆಯರಿಗೆ ಸ್ವಯಂ ಉದ್ಯೋಗ, ಉಳಿತಾಯ ಮಾಡುವ ಶಕ್ತಿ ನೀಡಿದ್ದು ಮಹಿಳೆಯರು ಕುಟುಂಬ ನಿರ್ವಹಣೆಯ ತಮ್ಮ‌ ಪಾಲು ಹೊಂದಿದ್ದಾರೆ’ ಎಂದು ಹೇಳಿದರು.

ವಕೀಲ ರಾಘವೇಂದ್ರ ಪಾನಘಂಟಿ, ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್‌ ಸದಸ್ಯ ಯಮನೂರಪ್ಪ ಹಾದಿಮನಿ, ರಾಧಾ ಕುಲಕರ್ಣಿ, ತ್ರಿಶಾಲ ಪಾಟೀಲ, ಗಂಗಾವತಿ ಆರ್‌ಎಸಿ ಬ್ಯಾಂಕ್‌ ಮುಖ್ಯ ವ್ಯವಸ್ಥಾಪಕ ವಿರೂಪಾಕ್ಷಪ್ಪ, ಅಳವಂಡಿ ಎಸ್‌ಬಿಐ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ಪಂಗಶ್ರೀರಾಮುಲು, ಕ್ಷೇತ್ರಾಧಿಕಾರಿ ಸತ್ಯಪ್ಪ ಗದಗಿನ, ಯೋಜನಾಧಿಕಾರಿ ಜಗದೀಶ, ಅಶೋಕ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT