ಕೊಪ್ಪಳ: ಮೊಬೈಲ್ ಫೋನ್ ಬಳಕೆಯಿಂದ ಮಕ್ಕಳು ಹಾಳಾಗುತ್ತಾರೆ ಎನ್ನುವ ಕಾರಣ ಮುಂದಿಟ್ಟು ಪೋಷಕರೇ ಮುಂದೆ ನಿಂತು ಮಗಳನ್ನು ಬಾಲ್ಯವಿವಾಹದ ಕೂಪಕ್ಕೆ ತಳ್ಳಲು ಮುಂದಾಗಿದ್ದ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮದುವೆ ತಡೆದು ಬಾಲಕಿಯನ್ನು ರಕ್ಷಿಸಿದ್ದಾರೆ.

ಯಲಬುರ್ಗಾ ತಾಲ್ಲೂಕಿನ ಬೇವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಿಯೊಬ್ಬಳ ಮದುವೆ ನಿಶ್ಚಯವಾಗಿ ಬಸವ ಜಯಂತಿ ಅಂಗವಾಗಿ ಏ. 20ರಂದು ಮದುವೆ ನಿಗದಿ ಮಾಡಲಾಗಿತ್ತು. ನಾಲ್ಕನೇ ತರಗತಿ ಓದುತ್ತಿದ್ದ ಬಾಲಕಿಯ ವಿವಾಹದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಪೋಷಕರು ’ಫೋನ್ ಬಳಕೆಯಿಂದ ಮಕ್ಕಳು ಹಾಳಾಗುತ್ತಾರೆ. ಈ ಕಾರಣಕ್ಕೆ ಬೇಗನೆ ಮದುವೆ ನಿಶ್ಚಯ ಮಾಡಿದ್ದೇವೆ’ ಎಂದಿದ್ದಾರೆ.

ಮತ್ತೊಂದು ಘಟನೆಯಲ್ಲಿ ವರನ ಕುಟುಂಬದವರು ಆರ್ಥಿಕವಾಗಿ ಸಬಲವಾಗಿದ್ದಾರೆ ಎನ್ನುವ ಕಾರಣಕ್ಕೆ ಕನಕಗಿರಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಎಂಟನೇ ತರಗತಿ ಓದುತ್ತಿದ್ದ ಬಾಲಕಿಗೆ ಮದುವೆ ಮಾಡಲು ಪೋಷಕರು ಮುಂದಾಗಿದ್ದರು. ಮಕ್ಕಳ ಸಹಾಯವಾಣಿ 1098ಗೆ ಬಂದ ಕರೆ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದಾಗ ಬಾಲಕಿಗೆ 16 ವರ್ಷವಷ್ಟೇ ಆಗಿರುವುದು ದೃಢಪಟ್ಟಿದೆ. ಕಾರ್ಯಾಚರಣೆ ನಡೆಸಿ ಎರಡೂ ಬಾಲ್ಯವಿವಾಹಗಳನ್ನು ತಡೆಗಟ್ಟಲಾಗಿದೆ.

‘ವಯಸ್ಸಿನ ಪೂರ್ವ ಮದುವೆ ಅಪಾಯಕಾರಿಯಾಗಿದ್ದು, ಮಗುವಿನ ಬದುಕನ್ನೇ ಹಾಳು ಮಾಡಿಬಿಡುತ್ತದೆ. ಸಹಾಯವಾಣಿಗೆ ಬಂದ ಫೋನ್ ಕರೆಯಿಂದಾಗಿ ಇಬ್ಬರು ಮಕ್ಕಳ ಬಾಲ್ಯವಿವಾಹ ತಪ್ಪಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.