ಶನಿವಾರ, ಡಿಸೆಂಬರ್ 3, 2022
19 °C

ಅಂಜನಾದ್ರಿ ಸುತ್ತ ಪಾರ್ಕಿಂಗ್ ವ್ಯವಸ್ಥೆ– ಡಿಸೆಂಬರ್‌ 3ರಿಂದ 5ರ ವರೆಗೆ ಹನುಮಮಾಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ಐತಿಹಾಸಿಕ ಧಾರ್ಮಿಕ ಪುಣ್ಯಕ್ಷೇತ್ರ ಅಂಜನಾದ್ರಿ ಬೆಟ್ಟದಲ್ಲಿ ಡಿ.3ರಿಂದ 5ರವರೆಗೆ ನಡೆಯಲಿರುವ ಹನುಮಮಾಲಾ ವಿಸರ್ಜನಾ ಕಾರ್ಯಕ್ರಮಕ್ಕೆ ಬರುವ ಭಕ್ತರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಿದ್ಧತೆ ನಡೆಸುತ್ತಿದೆ.

ಅಂಜನಾದ್ರಿ ಬೆಟ್ಟ ವಿಶ್ವ ಪ್ರಸಿದ್ದವಾಗಿ ಬೆಳೆದಿದ್ದು, ಹನುಮಮಾಲಾ, ಹನುಮ ಜಯಂತಿ ಅದ್ಧೂರಿಯಾಗಿ ನಡೆಯುತ್ತದೆ. ಕಳೆದ ಬಾರಿ ಕೋವಿಡ್ ವೇಳೆಯಲ್ಲೆ ಹನುಮಮಾಲಾ ವಿಸರ್ಜನೆ ಸಂಭ್ರಮದಿಂದ ಜರುಗಿ, 50 ಸಾವಿರಕ್ಕೂ ಹೆಚ್ಚಿನ ಭಕ್ತರು ಪಾಲ್ಗೊಂಡಿದ್ದರು.

ಈ ಬಾರಿ ಹನುಮಮಾಲಾ ವಿಸರ್ಜನೆಗೆ ಅಂದಾಜು 2 ಲಕ್ಷ ಜನ ಬರುವ ನಿರೀಕ್ಷೆ ಜಿಲ್ಲಾಡಳಿತ ಅಂದಾಜಿಸಿದ್ದು, ಅಂಜನಾದ್ರಿ ಬಳಿ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಕುರಿತು ಈಗಾಗಲೇ ಹಲವು ಬಾರಿ ತಹಶೀಲ್ದಾರ್‌ ಕಚೇರಿ, ಜಿಲ್ಲಾಡಳಿತ ಕಚೇರಿಯಲ್ಲಿ ಸಭೆ ನಡೆಸಲಾಗಿದೆ.

ಅಂಜನಾದ್ರಿ ದೇವಸ್ಥಾನದ ನೋಡಲ್ ಅಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಹನುಮಮಾಲಾ ವಿಸರ್ಜನೆ ನಿಮಿತ್ತ ಅಂಜನಾದ್ರಿ ಸುತ್ತಮುತ್ತ ಪಾರ್ಕಿಂಗ್ ವ್ಯವಸ್ಥೆಗೆ ತಾಲ್ಲೂಕು ಆಡಳಿತದ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳ ಸಹಯೋಗದಲ್ಲಿ 2 ಜೆಸಿಬಿಗಳ ಮೂಲಕ ಜಮೀನು, ಮೈದಾನ, ಖಾಲಿ ಸ್ಥಳಗಳನ್ನು ಸ್ವಚ್ಚಗೊಳಿಸಲಾಗುತ್ತಿದೆ.

17 ಸ್ಥಳಗಳಲ್ಲಿ ಪಾರ್ಕಿಂಗ್: ಹನುಮಮಾಲಾ ವಿಸರ್ಜನೆಗೆ ರಾಜ್ಯದ ವಿವಿಧ ಭಾಗಗಳಿಂದ ಬರುವ ಭಕ್ತರಿಗೆ ವಾಹನ ಸಂಚಾರ ದಟ್ಟಣೆ ತಪ್ಪಿಸಲು ಜಿಲ್ಲಾಡಳಿತ ಅಂಜನಾದ್ರಿ ಸಮೀಪದ ಹನುಮನಹಳ್ಳಿ, ಚಿಕ್ಕರಾಂಪುರ, ಪಂಪಾಸರೋವರ, ದುರ್ಗಾಬೆಟ್ಟ, ಆನೆಗೊಂದಿ ಮೈದಾನ ಸೇರಿ 17 ಕಡೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುತ್ತಿದೆ.

ಎಲ್ಲೆಲ್ಲಿ ಪಾರ್ಕಿಂಗ್?

ಆನೆಗೊಂದಿ ಉತ್ಸವ ಮೈದಾನ, ಹೊಲ, ದುರ್ಗಾಬೆಟ್ಟದ ಮುಂದಿನ ಹೊಲ, ಚಿಕ್ಕರಾಂಪುರ ಶಾಲೆಯ ಮುಂದಿನ ಜಮೀನು, ಪಂಪಾಸರೋವರ ಕ್ಯಾನಲ್ ಬಳಿ ಹೊಲ, ಶರೀಫ್, ಹುಸೇನ್, ರಾಮರೆಡ್ಡಿ ಹೊಲ, ರಾಮಕೃಷ್ಣ ಹೊಲ, ಶಿವು, ಗ್ರೀನ್ ಸ್ಟೋನ್ ಒಳಗಡೆಯ ಹೊಲದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇರಲಿದೆ.

'ರಾಯಚೂರು, ಬೆಂಗಳೂರು, ಚಿತ್ರದುರ್ಗ ಭಾಗದವರಿಗೆ ಆನೆಗೊಂದಿ, ದುರ್ಗಾಬೆಟ್ಟ, ಪಂಪಾಸರೋವರ ಬಳಿ, ಶಿವಮೊಗ್ಗ, ಹಾಸನ, ಹುಬ್ಬಳ್ಳಿ ಭಾಗದವರಿಗೆ ಹನುಮನಹಳ್ಳಿ ಸುತ್ತ ಜಮೀನುಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ’.

ಬಸವಣ್ಣೆಪ್ಪ ಕಲಶೆಟ್ಟಿ, ಕೊಪ್ಪಳ ಎಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.