ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಯಾರೂ ಹಾಡದ ಹಾಡು' ಹಾಡಿ ಮುಗಿಸಿದ ಪ್ರಗತಿಪರ ಸಂತ ಕವಿ

ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೃದಘಾಯಾಘಾತದಿಂದ ನಿಧನ
Last Updated 23 ಜುಲೈ 2021, 6:42 IST
ಅಕ್ಷರ ಗಾತ್ರ

ಕೊಪ್ಪಳ: ಹೋರಾಟ...ಹೋರಾಟ.. ದಣಿವರಿಯದ ಜೀವ. ಸಮಾನತೆಗೆ ಕೊನೆಯವರೆಗೂ ಮಿಡಿದ ಹಿರಿಯ ಜೀವ ಗುರುವಾರ ಅಸ್ತಂಗತವಾಗಿದ್ದು, ಹೋರಾಟದ ಕೊನೆಯ ಕೊಂಡಿ ಕಳಚಿತು.

ನಗರದ ಸಮೀಪದ ಭಾಗ್ಯನಗರದಲ್ಲಿ ನಿವಾಸಿಯಾಗಿದ್ದ ನೇಕಾರರ ಬೆವರಿನ ಶ್ರಮದ ಬೆನ್ನೆಲುವಾಗಿದ್ದ ಹಿರಿಯ ಪತ್ರಕರ್ತ, ಸಾಹಿತಿ, ನಾಟಕಕಾರ, ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿ(75) ಹೃದಯಾಘಾದಿಂದ ನಿಧನರಾಗಿದ್ದು ಜಿಲ್ಲೆಯ ವಿವಿಧ ಸಾಂಸ್ಕೃತಿಕ, ಸಾಹಿತ್ಯಿಕ, ಸಾಮಾಜಿಕ ಕ್ಷೇತ್ರಕ್ಕೆ ಆದ ನಷ್ಟ.

ವಿವಿಧ ವಾರ, ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಅಂಕಣ ಬರಹಗಾರರಾಗಿ ಸಾಹಿತ್ಯ ಕೃಷಿ ಮಾಡಿದ್ದಅವರಿಗೆ ಸಾಹಿತ್ಯ, ಪತ್ರಿಕಾ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿತ್ತು.ದಲಿತ, ದಮನಿತರ ಹೋರಾಟದಲ್ಲಿಸದಾ ಮುಂದು. ಜಿಲ್ಲಾ ರಚನೆ, ಕುದರಿಮೋತಿ ಹೋರಾಟದಲ್ಲಿ ಆಳುವ ವರ್ಗದ ಭಯವಿಲ್ಲದೇ, ಜೀವ ಬೆದರಿಕೆಗೆ ಜಗ್ಗದೇ ಹೋರಾಟಕ್ಕೆ ತಾರ್ಕಿಕ ಅಂತ್ಯ ನೀಡಿದ ಚಳಿವಳಿಗಾರ.

4ನೇ ತರಗತಿಯವರೆಗೆ ಓದಿದ್ದ ಅವರಸಾಹಿತ್ಯ ಕೃತಿಗಳು ವಿವಿಯ ಪಠ್ಯಕ್ರಮವಾಗಿದ್ದವಲ್ಲದೆ, ಪತ್ರಿಕಾ ಅಕಾಡೆಮಿ ಪ್ರಕಟಿಸಿದ 'ತನಿಖಾ ವರದಿ' ಕೃತಿ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಕನ್ನಡದ ಆಕಾರ ಗ್ರಂಥವಾಗಿತ್ತು.

ಎಡಪರ, ಪ್ರಗತಿಪರ, ಬುದ್ಧಿಜೀವಿ ಎನಿಸಿಕೊಂಡಿದ್ದರೂ ಅವರಲ್ಲಿ ಒಬ್ಬ ಅಧ್ಯಾತ್ಮದ ಹಸಿವಿನ ಮನಸ್ಸಿನ ಸನ್ಯಾಸತ್ವ ಅಡಗಿತ್ತು. ತಮ್ಮ 'ಸದಾನಂದ' ಆಶ್ರಮದಲ್ಲಿ ಸತ್ಸಂಗದ ಮೂಲಕ ಸಮ ಸಮಾಜ, ಸ್ವಾಸ್ಥ್ಯ ಪರಿಸರ ಕಟ್ಟುವಲ್ಲಿ ಅವಿರತ ಶ್ರಮಿಸಿದಸಂತ. ಭಗವದ್ಗೀತೆ, ವೇದ, ಉಪನಿಷತ್ತು, ವಚನಗಳನ್ನು ವೈದಿಕ, ಅವೈದಿಕ ನೆಲೆಯಲ್ಲಿ ವಿಮರ್ಶಿಸಿ ತುಂಬು ಬಾಳು ಬದುಕಿದಅವರು ಅಗಲಿ ಹೋಗಿದ್ದು, ಅವರ ಸಾವಿರಾರು ಅನುನಾಯಿಗಳನ್ನು ದುಃಖದ ಕಡಲಲ್ಲಿ ಮುಳುಗುವಂತೆ ಮಾಡಿತು.

ಸಾಹಿತ್ಯ ಸೇವೆ: ಅವರ ಇತ್ತೀಚಿನ ಗಾಂಧಿಯಿಂದ ಗೌರಿವರೆಗೆ ಐದು ನಾಟಕಕಗಳು ಪ್ರಶ್ನಿಸಿದವರನ್ನು ಹತ್ಯೆ ಮಾಡಿದ ಭಯೋತ್ಪಾದಕ ಮನಸ್ಥತಿಯನ್ನು ತಮ್ಮದೇ ನೆಲೆಯಲ್ಲಿ ಗ್ರಾಮ್ಯ ಭಾಷೆಯ ಮೂಲಕ ರಂಗದ ಮೇಲೆ ತಂದು ರಂಗಕರ್ಮಿಗಳಿಂದ ಸೈ ಎನಿಸಿಕೊಂಡಿದ್ದರು.

ಕಪ್ಪೊಡಲ ಕೆರೆ, ಈ ನೆಲದೊಡನೆ, ಯಾರೂ ಹಾಡದ ಹಾಡು, ಸೇತು ಬಂಧ ಕವನ ಸಂಕಲಮ, 'ನಿನ್ನ ನೀನು ತಿಳಿ' ತತ್ವಪದ, ಕಡಲೊಡಿನ ನೂರೆಂಟು ಹನಿ, ಸೆರೆ, ಆತ್ಮಾನಾಸ್ತು ಕಾಮಾಯ ಕಥಾ ಸಂಕಲನ, ಸದಾನಂದ ಸಂದೇಶ, ಹನುಮಂತಪ್ಪ ಅಂಗಡಿ ಜೀವನ ಚರಿತ್ರೆ, ಸಾಹಿತ್ಯ ಅಕಾಡೆಮಿಗೆ ಸಂಪಾದಿಸಿದ ಪ್ರಬಂಧ, ಕೊಪ್ಪಳ ಜಿಲ್ಲೆಯ ರಂಗ ಮಾಹಿತಿ, ಹಂಪಿ ವಿವಿಯಿಂದ ಪದ್ಮಶಾಲಿ ಸಮಾಜ, ಮೊದಲ ವಚನಕಾರ ದೇವರ ದಾಸಿಮಯ್ಯ, ನೇಕಾರಿಕೆ, ಕವಿಸಮಯ, ಕಲಾರಾಧಕ, ಒಳನೋಟ ಕೃತಿಗಳ ಮೂಲಕ ಸಾಹಿತ್ಯ ಸರಸ್ವತಿ ಬಂಢಾರ ತುಂಬಿಸಿದ ಮೇರು ಸಾಹಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT