ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ | ಹಾಲು ಕದ್ದರೇ ಕಾನ್‌ಸ್ಟೆಬಲ್‌?: ಸಾಮಾಜಿಕ ತಾಣದಲ್ಲಿ ಹರಿದಾಡಿದ ವಿಡಿಯೊ

Published : 9 ಸೆಪ್ಟೆಂಬರ್ 2024, 16:29 IST
Last Updated : 9 ಸೆಪ್ಟೆಂಬರ್ 2024, 16:29 IST
ಫಾಲೋ ಮಾಡಿ
Comments

ಕೊಪ್ಪಳ: ರಾತ್ರಿ ಗಸ್ತು ತಿರುಗುವ ವೇಳೆ ಪೊಲೀಸ್‌ ಹೆಡ್‌ ಕಾನ್‌ಸ್ಟೆಬಲ್‌ವೊಬ್ಬರು ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿ ಹಾಲಿನ‌ ಡೈರಿ ಬಳಿ ಹಾಲಿನ ಪಾಕೆಟ್‌ಗಳನ್ನು ಕದ್ದ ಆರೋಪ ಕೇಳಿಬಂದಿದೆ. ಅವರು ಹಾಲುಕದ್ದ ವಿಡಿಯೊಗಳು ಸಾಮಾಜಿಕ ತಾಣದಲ್ಲಿ ಹರಿದಾಡಿವೆ.

ಆಗಸ್ಟ್‌ 29ರಂದು ಈ ಘಟನೆ ನಡೆದಿದ್ದು, ರಾತ್ರಿ ಹಾಲಿನ ಡೈರಿ ಮುಂದೆ‌ ಇಟ್ಟಿದ್ದ ಟ್ರೇನಿಂದ ಹಾಲು ಕಳ್ಳತನ ಮಾಡಲಾಗಿದೆ. ಬೈಕ್‌ ಮೇಲೆ ಬಂದು ಪಾಕೆಟ್‌ಗಳನ್ನು ತೆಗೆದುಕೊಂಡು ಹೋದ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್‌. ಅರಸಿದ್ಧಿ ’ನಮ್ಮ ಸಿಬ್ಬಂದಿ ಹಾಲು ಕದ್ದ ಬಗ್ಗೆ ಯಾವುದೇ ದೂರು ಬಂದಿಲ್ಲ. ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಆಂತರಿಕವಾಗಿಯೂ ಮಾಹಿತಿ ಸಂಗ್ರಹಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT