ಕೊಪ್ಪಳ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆಗಿನ ಸಮ್ಮತಿ ಪತ್ರದಲ್ಲಿನ ನಿಯಮಗಳ ಉಲ್ಲಂಘನೆ ಕುರಿತು 9 ಕಾರ್ಖಾನೆಗಳಿಗೆ ಮಂಡಳಿಯು ಪ್ರಸ್ತಾವಿತ ನಿರ್ದೇಶನಗಳ ಸೂಚನೆ (ಎನ್ಪಿಡಿ) ನೋಟಿಸ್ ನೀಡಿದೆ.

ಹಿರೇಬಗನಾಳದ ಮೆ.ತನುಷ್ ಇಸ್ಪಾತ್ ಪ್ರೈವೆಟ್ ಲಿಮಿಟೆಡ್ ಯುನಿಟ್–1 (ಶರವಣಾ ಅಲಾಯ್ಸ್ ಸ್ಟೀಲ್ ಪ್ರೈವೆಟ್ ಲಿಮಿಟೆಡ್), ಯುನಿಟ್–2 (ಹರೇಕೃಷ್ಣಾ ಮೆಟಾಲಿಕ್ಸ್ ಸ್ಟೀಲ್ ಪ್ರೈವೇಟ್ ಲಿಮಿಟೆಡ್), ಧ್ರುವದೇಶ್ ಮೆಟಾ ಸ್ಟೀಲ್ ಪ್ರೈವೆಟ್ ಲಿಮಿಟೆಡ್, ಚಿಕ್ಕಬಗನಾಳದ ಬಾಬಾ ಅಖಿಲಾ ಸಾಯಿಜ್ಯೋತಿ ಇಂಡಸ್ಟ್ರೀಸ್, ಕುಣಿಕೇರಿಯ ಐಎಲ್ಸಿ ಐರನ್ ಮತ್ತು ಸ್ಟೀಲ್, ಭದ್ರಶ್ರೀ ಸ್ಟೀಲ್ ಮತ್ತು ಪವರ್ ಲಿಮಿಟೆಡ್, ಹಾಲವರ್ತಿಯ ಮೆ.ಪಿ. ಬಾಲಸುಬ್ಬಶೆಟ್ಟಿ ಅಂಡ್ ಸನ್ಸ್, ಎಸ್.ಕೆ. ಸ್ಟೀಲ್ಸ್ ಟೆಕ್ ಪ್ರೈವೆಟ್ ಲಿಮಿಟೆಡ್ ಮತ್ತು ಕೆರೆಹಳ್ಳಿ ಗ್ರಾಮದ ಕೊಪ್ಪಳ ಸ್ಟೀಲ್ಸ್ ಪ್ರೈವೆಟ್ ಲಿಮಿಟೆಡ್ ಕಂಪನಿಗಳಿಗೆ ಎನ್ಪಿಡಿ ನೀಡಲಾಗಿದೆ.

‘ಈ ಕಾರ್ಖಾನೆಗಳು ಸಲ್ಲಿಸಿದ ನಂತರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮತ್ತೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ವಹಿಸಲಾಗುವುದು, ಈ ವಿಷಯಕ್ಕೆ ಸಂಬಂಧಿಸಿ ಜಿಲ್ಲಾಡಳಿತದ ವತಿಯಿಂದಲೂ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಮಂಡಳಿಯ ಸೂಚನೆ ಮೇರೆಗೆ ಜಿಲ್ಲಾಡಳಿತ ಮೇ 21ರಂದು ಎರಡು ಕಾರ್ಖಾನೆಗಳಿಗೆ ಬೀಗಮುದ್ರೆ ಹಾಕಿದ್ದು, ಇನ್ನುಳಿದ ಮೂರು ಕಾರ್ಖಾನೆಗಳಿಗೆ ಬೀಗಮುದ್ರೆ ಮುದ್ರೆ ಒತ್ತುವ (ಕ್ಲೋಸರ್) ನೋಟಿಸ್ ಜಾರಿ ಮಾಡಿದೆ. ಇದಕ್ಕೆ ಸಮ್ಮತಿ ಲಭಿಸಿದ ಬಳಿಕ ಮುಂದಿನ ಕ್ರಮ ವಹಿಸುವುದಾಗಿ ಜಿಲ್ಲಾಡಳಿತ ತಿಳಿಸಿದೆ.

ಮಾಲಿನ್ಯಕಾರಕ ಕಾರ್ಖಾನೆಗಳ ಬಂದ್ ಮಾಡಬೇಕು, ಕಾರ್ಖಾನೆಗಳ ವಿಸ್ತರಣೆಗೆ ಅವಕಾಶ ನೀಡಬಾರದು ಎಂದು ಆಗ್ರಹಪಡಿಸಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ, ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆ 208 ದಿನಗಳಿಂದ ಧರಣಿ ನಡೆಸುತ್ತಿದೆ.

ಗಮನ ಸೆಳೆದ ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ವರದಿಗಳು

ಮಾಲಿನ್ಯ ಹಾಗೂ ಹೊಸದಾಗಿ ವಿಸ್ತರಣೆಯಾದರೆ ಜನರಿಗೆ ಆಗುವ ಸಮಸ್ಯೆಗಳ ಬಗ್ಗೆ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ನಿರಂತರ ವರದಿಗಳನ್ನು ಪ್ರಕಟಿಸಿದ್ದವು. ಈ ಸಮಸ್ಯೆಯ ಕುರಿತು ಡೆಕ್ಕನ್ ಹೆರಾಲ್ಡ್ನಲ್ಲಿ ಮೇ 17ರಂದು ಪ್ರಕಟವಾಗಿದ್ದ ವರದಿ ಆಧರಿಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳು ಕೊಪ್ಪಳ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ಅದರಂತೆ ಜಿಲ್ಲಾಧಿಕಾರಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನದ ಅನ್ವಯ ಈಗ ಒಂಬತ್ತು ಕಾರ್ಖಾನೆಗಳಿಗೆ ಎನ್ಪಿಡಿ ಜಾರಿ ಮಾಡಲಾಗಿದೆ. ಮಂಡಳಿ ಮುಂದಿನ ತೀರ್ಮಾನ ಕೈಗೊಳ್ಳಬೇಕಿದೆ.
-ಡಾ.ಸುರೇಶ ಇಟ್ನಾಳ, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.