ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಬ್‌ ಸ್ಫೋಟದ ಆರೋಪಿಗೆ ಮಾತ್ರೆ!

Last Updated 10 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದ ಸರಣಿ ಬಾಂಬ್‌ ಸ್ಫೋಟದ ಆರೋಪಿಯೊಬ್ಬನಿಗೆ ಅಪರಿಚಿತರಿಬ್ಬರು ಮಾತ್ರೆಗಳನ್ನು ನೀಡಿದ್ದು, ಈ ಸಂಬಂಧ ಹಲಸೂರು ಗೇಟ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಬಂಧಿಯಾಗಿರುವ ಬಾಂಬ್‌ಸ್ಫೋಟ ಪ್ರಕರಣದ 19 ಆರೋಪಿಗಳನ್ನು ವಿಚಾರಣೆಗೆಂದು ಸೋಮವಾರ ಬೆಳಿಗ್ಗೆ ವಿಶೇಷ ನ್ಯಾಯಾಲಯಕ್ಕೆ ಕರೆ
ತರಲಾಗಿತ್ತು. ಅದೇ ವೇಳೆ ನ್ಯಾಯಾ
ಲಯದ ಕಟ್ಟಡಕ್ಕೆ ಬಂದಿದ್ದ ಅಪರಿಚಿತರಿಬ್ಬರು, ಪೊಲೀಸರ ಕಣ್ತಪ್ಪಿಸಿ ಆರೋಪಿಗಳ ಪೈಕಿ ಒಬ್ಬನಾದ ಅಬ್ದುಲ್‌ ಖಾದರ್‌ಗೆ ಮಾತ್ರೆಗಳಿದ್ದ ಪೊಟ್ಟಣವನ್ನು ಕೊಟ್ಟಿದ್ದಾರೆ.

‌ಇದನ್ನು ದೂರದಿಂದಲೇ ನೋಡಿದ್ದ ಬೆಂಗಳೂರು ದಕ್ಷಿಣ ಸಶಸ್ತ್ರ ಮೀಸಲು ಪಡೆಯ ಸಬ್‌ಇನ್‌ಸ್ಪೆಕ್ಟರೊಬ್ಬರು ಆ ಅಪರಿಚಿತರಿಬ್ಬರನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಅವರ ಹೇಳಿಕೆ ಪಡೆದು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

‘ಬೆಂಗಳೂರಿನಲ್ಲಿ ಸಂಭವಿಸಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ವಿಚಾರಣೆಯು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಪ್ರಕರಣದ ಆರೋಪಿಗಳನ್ನು  ಕಾರಾಗೃಹದಿಂದ ನ್ಯಾಯಾಲಯಕ್ಕೆ ಕರೆದುಕೊಂಡು ಬಂದಿದ್ದ ವೇಳೆ ಈ ಘಟನೆ ನಡೆದಿದೆ.

‘ಆರೋಪಿಗಳ ಸುತ್ತಮುತ್ತ ಶಸ್ತ್ರಸಜ್ಜಿತ ಕಾನ್‌ಸ್ಟೆಬಲ್‌ಗಳೂ ಇದ್ದರು. ಅವರೆಲ್ಲರ ಕಣ್ತಪ್ಪಿಸಿದ್ದ ಅಪರಿಚಿತರು, ಅಬ್ದುಲ್‌ ಖಾದರ್‌ ಕೈಗೆ 50 ಮಾತ್ರೆಗಳನ್ನು ಕೊಟ್ಟಿದ್ದಾರೆ. ಅವುಗಳನ್ನು ಜಪ್ತಿ ಮಾಡಿದ್ದೇವೆ. ಆ ಮಾತ್ರೆಗಳ ಹೆಸರು ಏನು ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಆರೋಪಿಗಳ ಕೈಗೆ ಈ ಮಾತ್ರೆಗಳು ಸಿಕ್ಕರೆ ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ ಎಂದಷ್ಟೇ ಹೇಳಬಹುದು.

‘ಅಪರಿಚಿತರು, ಬೆಂಗಳೂರಿನ ನಿವಾಸಿಗಳು ಅವರಿ
ಬ್ಬರ ವಿಚಾರಣೆ ನಡೆಸುತ್ತಿದ್ದೇವೆ. ಸದ್ಯಕ್ಕೆ ಹೆಸರು ಬಹಿರಂಗಪಡಿಸುವುದಿಲ್ಲ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT