ಗಂಗಾವತಿ: ಕೋಲ್ಕತ್ತಾ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ನಿಯ ಕೊಲೆ ಖಂಡಿಸಿ, ಬುಧವಾರ ಸಂಜೆ ಕೊಪ್ಪಳ ಜಿಲ್ಲಾ ವೈದ್ಯಾಧಿಕಾರಿಗಳ ಸಂಘದ ಸದಸ್ಯರು ನಗರದ ಕೃಷ್ಣದೇವ ರಾಯ ವೃತ್ತದಲ್ಲಿ ಮೇಣದಬತ್ತಿ ಹಿಡಿದು ಪ್ರತಿಭಟನೆ ನಡೆಸಿ ದರು.
ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ. ಈಶ್ವರ ಸವಡಿ ಮಾತನಾಡಿ, ವೈದ್ಯಕೀಯ ಕಾಲೇಜಿನ ಸೇಮಿನಾರ್ ಹಾಲಿನ ಲ್ಲಿ ವಿದ್ಯಾರ್ಥಿನಿ ಹತ್ಯೆ ನಡೆದಿದ್ದು,ಹತ್ಯೆಗೂ ಮುನ್ನ ಅತ್ಯಾಚಾ ರ ನಡೆದಿರುವ ಕುರಿತು ಸಾಕ್ಷಿಗಳು ದೊರೆತಿವೆ. ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ಹತ್ಯೆ ನಡೆಯುತ್ತೆಂದರೇ, ಕಾಲೇಜಿನ ಭ ದ್ರತೆ ಎಷ್ಟರಮಟ್ಟಿಗೆ ನಿರ್ವಹಣೆ ಮಾಡಲಾಗಿದೆ ಎಂಬುದು ತಿಳಿಯಬೇಕಾಗಿದೆ.
ಈಚೆಗೆ ಕರ್ತವ್ಯನಿರತ ವೈದ್ಯರ, ನರ್ಸ್ ಮೇಲೆ ಸಾಕಷ್ಟು ಹ ಲ್ಲೆ, ಅತ್ಯಾಚಾರಗಳು ಜರುಗುತ್ತಿದ್ದು, ಸಂಬಂಧಪಟ್ಟ ಅಧಿಕಾ ರಿಗಳು ಇಂತಹ ಹೇಯ ಕೃತ್ಯಗಳಿಗೆ ಕಡಿವಾಣ ಹಾಕುವ ಕೆಲ ಸ ಮಾಡಬೇಕು. ಜೊತೆಗೆ ಆಸ್ಪತ್ರೆ, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೂ ಸೂಕ್ತರಕ್ಷಣೆ ಕಲ್ಪಿಸಬೇಕು. ವಿದ್ಯಾರ್ಥಿನಿ ಯನ್ನ ಹತ್ಯೆಗೈದ ಆರೋಪಿಗಳಿಗೆ ಕಠಿಣವಾಗಿ ಶಿಕ್ಷಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ವೈದ್ಯಾಧಿಕಾರಿಗಳ ಸಂಘದ ಸದಸ್ಯರು ಶ್ರೀ ಕೃಷ್ಣದೇವರಾಯ ವೃತ್ತದವರೆಗೆ ಮೇಣದ ಬತ್ತಿ ಹಿಡಿದು ಬಂ ದು, ವಿದ್ಯಾರ್ಥಿನಿ ಹತ್ಯೆಗೆ ಸಂತಾಪ ಸೂಚಿಸಿದರು.
ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಲಿಂಗ ರಾಜ, ತಾಲ್ಲೂಕು ವೈದ್ಯಾಧಿಕಾರಿ ಡಾ.ಗೌರಿಶಂಕರ, ಡಾ.ನಂದಕುಮಾರ, ಡಾ.ಶಕುಂತಲಾ,ಡಾ.ರಾಮಾಂಜಿನೇಯ,ಡಾ.ರಮೇಶ, ಡಾ.ವಾದಿರಾಜ, ಸರ್ಕಾರಿ ವೈದ್ಯಾಧಿಕಾರಿ ಸಂಘ ದ ಜಿಲ್ಲಾ ಉಪಾಧ್ಯಕ್ಷ ಡಾ.ಕಾವೇರಿ ಸೇರಿ ನೂರಾರು ಸಂಖ್ಯೆ ಯ ವೈದ್ಯರು ಪಾಲ್ಗೊಂಡಿದ್ದರು.