ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಗಾಳಿ ಸಮೇತ ಸುರಿದ ಮಳೆ

Last Updated 18 ಮೇ 2022, 4:07 IST
ಅಕ್ಷರ ಗಾತ್ರ

ಯಲಬುರ್ಗಾ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಸಂಜೆ ಬಿರುಗಾಳಿ ಸಮೇತ ಮಳೆ ಸುರಿದಿದೆ. ಮುಂಗಾರು ಪ್ರಾರಂಭಗೊಳ್ಳುವ ಮುನ್ನ ಸುರಿಯುತ್ತಿರುವ ಮಳೆಯು ಭೂಮಿಯ ಹದಗೊಳ್ಳುವುದರಿಂದ ರೈತರ ಸಂತಸಕ್ಕೆ ಕಾರಣವಾಗುತ್ತಿದೆ.

ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಚರಂಡಿಗಳು ಭರ್ತಿಯಾಗಿ ರಸ್ತೆಯ ಮೇಲೆ ಕೊಳಚೆ ನೀರು ಹರಿದು ಸಂಚಾರಕ್ಕೆ ಅಡಚಣೆ ಉಂಟು ಮಾಡಿತು. ಕೆಲವೊಂದು ಕಡೆ ಸಿಮೆಂಟ್ ರಸ್ತೆ ಸರಿಯಾಗಿ ನಿರ್ವಹಿಸದೇ ಕಳಪೆಯಾಗಿದ್ದರಿಂದ ನೀರು ಹರಿದು ಹೋಗದೇ ರಸ್ತೆಯ ಮೇಲೆ ಸಂಗ್ರಹವಾಗುವಂತಿರುವುದರಿಂದ ಸಾರ್ವಜನಿರಿಗೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಬಿರುಗಾಳಿ ಬೀಸುತ್ತಿದ್ದಂತೆ ವಿದ್ಯುತ್ ಸಂಪರ್ಕ ಕಡತಗೊಂಡಿದ್ದು 3– 4 ಗಂಟೆಕಾಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

ತಂಪೆರೆದ ಮಳೆ
ಕುಕನೂರು:
ಪಟ್ಟಣ ಹಾಗೂ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಮಂಗಳವಾರ ಸಂಜೆ 30 ನಿಮಿಷಗಳ ಕಾಲ ಗಾಳಿ ಸಹಿತ ಮಳೆಯಾಗಿದೆ. ಇದರಿಂದಾಗಿ ವಾತಾವರಣ ಕೊಂಚ ತಂಪಾಯಿತು.

ಬೆಳಿಗ್ಗೆಯಿಂದ ತಾಲ್ಲೂಕಿನಾದ್ಯಂತ ಬಿಸಿಲಿನ ವಾತಾವರಣ ಇತ್ತು. ಮಧ್ಯಾಹ್ನ 4.40 ಸಮಯದಲ್ಲಿ ಮೋಡ ಕವಿಯಲು ಆರಂಭವಾಯಿತು. ಇದಾದ ಕೆಲವೇ ಹೊತ್ತಿನಲ್ಲಿ ಜೋರಾಗಿ ಗಾಳಿ ಬೀಸಿ ಮಳೆ ಸುರಿಯಲು ಆರಂಭವಾಯಿತು.

ತಾಲ್ಲೂಕಿನ ರಾಜೂರು, ದ್ಯಾಂಪೂರು, ಮಂಡಲಗಿರಿ, ನಿಟ್ಟಾಲಿ, ಬೆಣಕಲ್ ಹಲವೆಡೆ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT