ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಬುರ್ಗಾ ತಾಲ್ಲೂಕಿನಾದ್ಯಂತ ನಿರಂತರ ಮಳೆ: ಜನಜೀವನ ಅಸ್ತವ್ಯಸ್ತ

ಸುಮಾರು 180 ಹೆಕ್ಟೇರ್‌ ಪ್ರದೇಶದ ಬೆಳೆ ನಾಶ: 150ಕ್ಕೂ ಹೆಚ್ಚು ಮನೆಗಳು ಕುಸಿತ
Last Updated 12 ಅಕ್ಟೋಬರ್ 2020, 13:15 IST
ಅಕ್ಷರ ಗಾತ್ರ

ಯಲಬುರ್ಗಾ: ಪಟ್ಟಣ ಸೇರಿ ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಕೆರೆಗಳು, ಹಳ್ಳಗಳು ತುಂಬಿ ಹರಿದಿವೆ.

ಜನಜೀವನ ಅಸ್ತವ್ಯಸ್ತವಾಗಿದೆ. ಮನೆಗಳು ಕುಸಿದಿವೆ. ಬೆಳೆಗಳು ಜಲಾವೃತಗೊಂಡು ಅಪಾರ ನಷ್ಟ ಸಂಭವಿಸಿದೆ.

ಎಲ್ಲೆಲ್ಲಿ ಎಷ್ಟು ಮಳೆ: ಯಲಬುರ್ಗಾ 64, ಹಿರೇವಂಕಲಕುಂಟಾ 3.4, ಕುಕನೂರು 55, ಬೇವೂರು 90.2, ಯಡ್ಡೋಣಿ 11, ಮಂಗಳೂರು 60 ಹಾಗೂ ನಿಂಗಾಪೂರದಲ್ಲಿ 22.6 ಎಂ.ಎಂ ಮಳೆ ಸುರಿದಿದೆ. ಒಟ್ಟು 306.2 ಮಿಲಿ ಮೀಟರ್ ಮಳೆ ಹನಿದಿದೆ.

ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕೆಲ ಮಣ್ಣಿನ ಮನೆಗಳು ಕುಸಿದಿರುವುದು ವರದಿಯಾಗಿದೆ. ಕಂದಾಯ ಇಲಾಖೆಯ ಪ್ರಾಥಮಿಕ ವರದಿ ಪ್ರಕಾರ ಸುಮಾರು 150ಕ್ಕೂ ಅಧಿಕ ಮನೆಗಳು ಬಿದ್ದಿವೆ. ತೋಟಗಾರಿಕೆ ಹಾಗೂ ಕೃಷಿ ಇಲಾಖೆಗಳು 180 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಿವೆ.

ತೋಟಗಾರಿಕೆ ಬೆಳೆಗಳನ್ನು ಬೆಳೆದಿದ್ದ ರೈತರಿಗೆ ಭಾರಿ ನಷ್ಟ ಸಂಭವಿಸಿದೆ. ನೀರು ನಿಂತು ಬೆಳೆ ಕೊಳೆಯಲಾರಂಭಿಸಿದೆ.

ಕಪ್ಪು ಮಣ್ಣಿನ ಬಹುತೇಕ ಹೊಲಗಳ ಬದು ಹಾಗೂ ಒಡ್ಡುಗಳು ಒಡೆದು ಮಣ್ಣು ಹಳ್ಳ ಸೇರಿದೆ. ಅಲ್ಲಲ್ಲಿ ನಿರ್ಮಿಸಿದ್ದ ಕೃಷಿ ಹೊಂಡಗಳು ಭರ್ತಿಯಾಗಿ ರೈತರಿಗೆ ಆಸರೆಯಾಗಿವೆ.

ಹಿಂಗಾರು ಬಿತ್ತನೆಗೆ ಮುಂದಾಗಿದ್ದ ರೈತರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಆದರೆ ಬಿತ್ತನೆಗೆ ಹೊಲ ಹಸನು ಮಾಡಿಲ್ಲ ಎನ್ನುವ ಚಿಂತೆ ಕೆಲ ರೈತರನ್ನು ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT