ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ್‍ಯಾಪ್‌ ಅಲ್ಬಂ ಹಾಡು ಬಿಡುಗಡೆ 8ರಂದು

Last Updated 7 ಅಕ್ಟೋಬರ್ 2022, 16:01 IST
ಅಕ್ಷರ ಗಾತ್ರ

ಕೊಪ್ಪಳ: ಸ್ಥಳೀಯ ಪ್ರತಿಭೆ ರಾಕ್‌ ಮಲ್ಲು ಅಭಿನಯಿಸಿರುವ ಉತ್ತರ ಕರ್ನಾಟಕ ಶೈಲಿಯಲ್ಲಿರುವ 'ಯಾರ್ ಲೇ ಈಕಿ ಹುಡ್ಗಿ' ರ‌್ಯಾಪ್ ಅಲ್ಬಂ ಹಾಡು ಶನಿವಾರ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ.

ರಾಕ್‌ ಮಲ್ಲು ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಇದು ನನ್ನ 8ನೇ ಅಲ್ಬಂ ಹಾಡು. ಈ ಬಾರಿ ಯಾರ್ ಲೇ ಈಕಿ ಹುಡ್ಗಿ ಅಲ್ಬಂ ಹಾಡಿನ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ಮಾಡಲಾಗಿದೆ. ಇದಕ್ಕಾಗಿ ಅಂದಾಜು ₹2 ಲಕ್ಷ ಖರ್ಚಾಗಿದೆ’ ಎಂದು ತಿಳಿಸಿದರು.

‘ಸಿನಿಮಾ ರಂಗದಲ್ಲಿ ಉನ್ನತ ಸಾಧನೆ ಮಾಡುವ ಗುರಿಯಿದೆ. ಈಗಾಗಲೇ ನಾನು ಮತ್ತು ಗುಂಡ ಹಾಗೂ ನೆನಪಿದೆ ಎಂಬ ಎರಡು ಸಿನಿಮಾಗಳಲ್ಲಿ ನಟಿಸಿದ್ದೇನೆ. ಈಗ ಹಾಡಿನ ಚಿತ್ರೀಕರಣಕ್ಕೆ ಸ್ನೇಹಿತರು ನೆರವಾಗಿದ್ದಾರೆ. ನಮ್ಮ ಭಾಗದಲ್ಲಿ ಸಾಕಷ್ಟು ಪ್ರತಿಭಾನ್ವಿತ ಕಲಾವಿದರು ಇದ್ದು, ಅವರಿಗೆ ಅವಕಾಶಗಳ ಕೊರತೆಯಿದೆ’ ಎಂದರು.

ಬಸಮ್ಮ ಹೂಗಾರ ನಿರ್ಮಾಣದ ಹಾಡಿಗೆ ಡ್ಯಾನ್ಸಿ ಸಾಹಿತ್ಯ ಬರೆದಿದ್ದಾರೆ. ರಾಘವ್ ಸಂಗೀತ ನೀಡಿದ್ದು, ಹರ್ಷವರ್ಧನ್ ಕೊರಿಯಾಗ್ರಫಿ ಮಾಡಿದ್ದಾರೆ. ನಂದಕುಮಾರ ನಿರ್ದೇಶಿಸಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT