ಕೊಪ್ಪಳ: ಮಿಲಿಯನ್ ಡಾಲರ್ ಬೇಬಿ ಎಂದೇ ಹೆಸರಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಸತತ ಎರಡನೇ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಆಗಿದ್ದು ಆ ಗೆಲುವಿನ ಕ್ಷಣಗಳನ್ನು ಕೊಪ್ಪಳದ ಕ್ರಿಕೆಟ್ ಪ್ರೇಮಿಗಳು ಭಾನುವಾರ ರಾತ್ರಿ ಆನಂದಿಸಿದರು.

ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ಹಾಗೂ ಕೊಪ್ಪಳ ಜಿಲ್ಲಾ ಕ್ರಿಕೆಟ್ ಸಂಸ್ಥೆ ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಐಪಿಎಲ್ ಫೈನಲ್ ಪಂದ್ಯ ವೀಕ್ಷಿಸಲು ಸಾರ್ವಜನಿಕರಿಗೆ ಉಚಿತವಾಗಿ ವ್ಯವಸ್ಥೆ ಮಾಡಿತ್ತು. ದೊಡ್ಡದಾದ ಪರದೆ ಹಾಕಿ ಪುರುಷರು ಹಾಗೂ ಮಹಿಳೆಯರಿಗೆ ಕುಳಿತುಕೊಳ್ಳಲು ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಿತ್ತು. ಕಳೆದ ವರ್ಷವೂ ಪಂದ್ಯ ವೀಕ್ಷಿಸಲು ಇದೇ ರೀತಿ ಸೌಲಭ್ಯ ಕಲ್ಪಿಸಲಾಗಿತ್ತು.

ಸಂಭ್ರಮ: ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಕ್ರೀಡಾಂಗಣದಲ್ಲಿ ಜನ ಸಂಭ್ರಮಿಸಿದರು. ವಾರಾಂತ್ಯದ ರಜೆಯ ದಿನವೂ ಆಗಿದ್ದರಿಂದ ಬಹಳಷ್ಟು ಜನ ಕುಟುಂಬದೊಂದಿಗೆ ಬಂದು ಐಪಿಎಲ್ ಸಡಗರದಲ್ಲಿ ಭಾಗಿಯಾದರು.

ಗುಜರಾತ್ ಟೈಟನ್ಸ್ ತಂಡ ಮೊದಲು ಬ್ಯಾಟ್ ಮಾಡುವಾಗ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡಿತು. ಬೆಂಗಳೂರು ತಂಡದ ಬೌಲರ್ಗಳು ಪಾರಮ್ಯ ಮೆರೆದು ವಿಕೆಟ್ಗಳನ್ನು ಉರುಳಿಸಿದಾಗ ಯುವಜನತೆ ಹಾಗೂ ಮಕ್ಕಳು ಕುಣಿದು ಸಂಭ್ರಮಿಸಿದರು. ಗುಜರಾತ್ ತಂಡದ ಪ್ರತಿ ವಿಕೆಟ್ ಪತನವಾದಾಗ ಬಾಣಬಿರುಸುಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದವು.

ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಸಂಘಟಕರೇ ಉಚಿತವಾಗಿ ಉಪಾಹಾರದ ವ್ಯವಸ್ಥೆ ಮಾಡಿದ್ದರು. ಬಹಳಷ್ಟು ಜನ ಬೆಂಗಳೂರು ತಂಡದ ಪೋಷಾಕು ಹಾಗೂ ಧ್ವಜ ಹಿಡಿದು ಬೆಂಬಲಿಸಿದರು.

ಸಾಕಷ್ಟು ಕುರ್ಚಿಗಳನ್ನು ಹಾಕಲಾಗಿತ್ತು. ಅದಕ್ಕೂ ಮಿಗಿಲಾಗಿ ಜನ ಬಂದಿದ್ದರಿಂದ ಕ್ರಿಕೆಟ್ ಅಭಿಮಾನಿಗಳು ನಿಂತುಕೊಂಡು, ಇನ್ನೂ ಹಲವರು ಕ್ರೀಡಾಂಗಣದ ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸಿದರು.

ಬೆಂಗಳೂರು ತಂಡಕ್ಕೆ ಸುಲಭ ಗುರಿಯಿದ್ದ ಕಾರಣ ತಂಡದ ಅಭಿಮಾನಿಗಳು ಆರ್.ಸಿ.ಬಿ. ಬ್ಯಾಟಿಂಗ್ ಇನಿಂಗ್ಸ್ ಆರಂಭಕ್ಕೂ ಮೊದಲಿನಿಂದಲೇ ಸಂಭ್ರಮದಲ್ಲಿದ್ದರು. ಕೋಟ್ಯಂತರ ಜನರ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ ಬೌಂಡರಿ ಹಾಗೂ ಸಿಕ್ಸರ್ ಮೂಲಕ ಆರ್ಭಟಿಸಿದಂತೆಲ್ಲ ಇಲ್ಲಿನ ಯುವಜನತೆ ಕುಣಿದು ಖುಷಿ ಪಟ್ಟರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ಅಧ್ಯಕ್ಷರೂ ಆದ ಸಂಸದ ರಾಜಶೇಖರ ಹಿಟ್ನಾಳ, ಉದ್ಯಮಿ ಶ್ರೀನಿವಾಸ ಗುಪ್ತಾ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ ಸೇರಿದಂತೆ ಅನೇಕರು ಐಪಿಎಲ್ ಫೈನಲ್ ನೋಡುವ ಸಡಗರದಲ್ಲಿ ಜನರೊಂದಿಗೆ ಭಾಗಿಯಾದರು. ಪಂದ್ಯದ ಆರಂಭದಿಂದ ಕೊನೆಯ ತನಕ ಸಂಭ್ರಮ ಮನೆಮಾಡಿದ್ದ ಇಲ್ಲಿನ ಕ್ರೀಡಾಂಗಣದಲ್ಲಿ ಬೆಂಗಳೂರು ತಂಡದ ಗೆಲುವು ಕೊನೆಯಲ್ಲಿ ಜನರ ಖುಷಿ ದುಪ್ಪಟ್ಟು ಮಾಡಿತು. ಆರ್.ಸಿ.ಬಿ., ಆರ್.ಸಿ.ಬಿ. ಎನ್ನುವ ಘೋಷಣೆಗಳು ನಿರಂತರವಾಗಿ ಮೊಳಗುತ್ತಲೇ ಇದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.