ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ| ಮಾನವೀಯ ಕಲ್ಯಾಣವೇ ರೆಡ್ ಕ್ರಾಸ್ ಧ್ಯೇಯ: ಡಿ.ಸಿ

Last Updated 5 ಫೆಬ್ರುವರಿ 2023, 6:02 IST
ಅಕ್ಷರ ಗಾತ್ರ

ಕೊಪ್ಪಳ: ‘ಅಂತರರಾಷ್ಟ್ರೀಯ ಸಂಸ್ಥೆಯಾಗಿರುವ ಭಾರತೀಯ ರೆಡ್ ಕ್ರಾಸ್ ವಿಶ್ವದಲ್ಲಿಯೇ ತನ್ನದೇ ಆದ ಘನತೆ ಹೊಂದಿದೆ. ಮಾನವ ಕಲ್ಯಾಣವೇ ಅದರ ಧ್ಯೇಯವಾಗಿದೆ’ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಶಾಖೆಯ 2021, 2022 ಹಾಗೂ 2023ರ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ ‘ಪ್ರತಿಯೊಬ್ಬರು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯನ್ನು ಗೌರವಿಸಲೇಬೇಕು. ಸದಾ ಸಮಾಜಮುಖಿ ಕಾರ್ಯದಲ್ಲಿ ಅದು ತೊಡಗಿರುತ್ತದೆ’ ಎಂದರು.

‘ಸಂಸ್ಥೆಯ ಕೊಪ್ಪಳ ಶಾಖೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡ ಹೊಂದಲು ಈಗಾಗಲೇ ನಿರ್ಮಾಣ ಕಾರ್ಯ ನಡೆದಿದೆ. ಅಲ್ಲಿ ಬ್ಲಡ್ ಬ್ಯಾಂಕ್, ಸ್ಕಿನ್ ಬ್ಯಾಂಕ್ , ಬಾಡಿ ಬ್ಯಾಂಕ್, ಐ ಬ್ಯಾಂಕ್ ಸೇರಿದಂತೆ ಮೊದಲಾದ ಉನ್ನತ ಸೇವೆ ಮಾಡಲಿದೆ. ಇದಕ್ಕೆ ಜಿಲ್ಲಾಡಳಿತ ನೆರವು ನೀಡಲಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಫೌಜಿಯಾ ತರನ್ನುಮ್‌ ವಾರ್ಷಿಕ ವರದಿಯ ಪುಸ್ತಕ ಬಿಡುಗಡೆ ಮಾಡಿದರು. ಅತ್ಯಧಿಕ ರಕ್ತದಾನ ಮಾಡಿದ ಮತ್ತು ನೇತ್ರದಾನ ಮಾಡಿದ ಕುಟುಂಬದವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಜಿಲ್ಲಾ ಶಾಖೆಯ ಚೇರ್ಮನ್‌ ಸೋಮರಡ್ಡಿ ಅಳವಂಡಿ, ಪ್ರಧಾನ ಕಾರ್ಯದರ್ಶಿ ಡಾ. ಶ್ರೀನಿವಾಸ ಹ್ಯಾಟಿ, ಖಜಾಂಚಿ ಸುಧೀರ ಅವರಾದ, ಅಭಿಷೇಕ ಸಜ್ಜನ, ಡಾ. ಸಿ.ಎಸ್. ಕರಮುಡಿ, ಡಾ. ಶಿವನಗೌಡ ಹಾಗೂ ಡಾ. ಮಂಜುನಾಥ ಸಜ್ಜನ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT