ಹನುಮಸಾಗರ: ‘ಮಳೆಗೆ ಹನುಮಸಾಗರದಿಂದ ಗಜೇಂದ್ರಗಡಕ್ಕೆ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ರಸ್ತೆಯ ಡಾಂಬರ್ ಸಂಪೂರ್ಣ ಕಿತ್ತುಬಂದಿದೆ. ರಸ್ತೆ ತುಂಬೆಲ್ಲಾ ಗುಂಡಿಗಳಿಂದ ಕೂಡಿದ್ದು, ಪರಿಣಾಮ ಇಳಕಲ್‌ನಿಂದ ಗಜೇಂದ್ರಗಡಕ್ಕೆ ಹೋಗುವ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ ಬಸ್ ನಿಲ್ದಾಣದ ಪರಿಸರ ಅಲ್ಲದೆ, ಶಾಲಾ ಮಕ್ಕಳು ಹಾಗೂ ಅನ್ಯ ಸಾರ್ವಜನಿಕರ ಸಂಚಾರಕ್ಕೂ ಈ ರಸ್ತೆ ಪ್ರಮುಖವಾಗಿದೆ. ಹೀಗಾಗಿ, ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಂಡು, ಈ ದುಸ್ಥಿತಿಯನ್ನು ಪರಿಹರಿಸಬೇಕು ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.
ಹವಾಮಾನ ಇಲಾಖೆ ನೀಡಿರುವ ಮುನ್ನೆಚ್ಚರಿಕೆಗಳನ್ವಯ, ಇನ್ನೂ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ, ಗ್ರಾಮ ಪಂಚಾಯಿತಿ, ತುರ್ತು ದುರಸ್ತಿ ಕಾರ್ಯವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕು ಎಂದು ರಾಹುಲ್ ದೇವಸಿಂಗ್ ಮನವಿ ಮಾಡಿದ್ದಾರೆ.
ಪಂಚಾಯತಿ ಅಧಿಕಾರಿಗಳಿಗೆ ಸಾರ್ವಜನಿಕರು ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಮನವಿ ಪತ್ರ ಸಲ್ಲಿಸಿದರು.
ರಸ್ತೆ ದುರಸ್ತಿಗಾಗಿ ಗ್ರಾಮ ಪಂಚಾಯತಿಯ ಅಧಿಕಾರಿಗಳಿಗೆ ಸಾರ್ವಜನಿಕರು ಮನವಿ ಪತ್ರ ಸಲ್ಲಿಸಿದರು
ಗುಂಡಿಗಳನ್ನು ಹರಸಾಹಸದಿಂದ ವಾಹನ ಸಂಚಾರ ಮಾಡುತ್ತಿರುವಂತಹ ವಾಹನ ಚಾಲಕ