ಶ್ರಾವಣ ಸೋಮವಾರೆ: ರೊಟ್ಟಿ ಪಂಚಮಿ

7
ವಿವಿಧ ದೇಗುಲಗಳಲ್ಲಿ ವಿಶೇ ಪೂಜೆ, ಪ್ರವಚನ

ಶ್ರಾವಣ ಸೋಮವಾರೆ: ರೊಟ್ಟಿ ಪಂಚಮಿ

Published:
Updated:
Deccan Herald

ಕೊಪ್ಪಳ: ಶ್ರಾವಣಮಾಸದ ಪ್ರಯುಕ್ತ ಜಿಲ್ಲೆಯಾದ್ಯಂತ ಸಂಭ್ರಮ-ಸಡಗರದಿಂದ ವಿವಿಧ ದೇವಾಲಯಗಳಲ್ಲಿ ಪೂಜೆ, ಅಭಿಷೇಕ ನಡೆದವು.

ನಗರದ ಆರಾಧ್ಯದೈವ ಗವಿಸಿದ್ಧೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ವಿವಿಧ ಭಾಗದಿಂದ ನೂರಾರು ಭಕ್ತರು ಸರತಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಭಕ್ತರಿಗೆ ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಈಶ್ವರ, ನಂದಿ, ಆಂಜನೇಯ, ಮಳೆ ಮಲ್ಲೇಶ್ವರ ಸನ್ನಿಧಿಯಲ್ಲಿ ಭಕ್ತರ ದಂಡು ಕಂಡು ಬಂತು.

ಅಲ್ಲದೆ ನಾಗರ ಅಮಾವಾಸ್ಯೆ ಆರಂಭವಾದ ದಿನದಿಂದ ಒಂದು ವಾರಗಳ ಕಾಲ ಪಂಚಮಿ ಹಬ್ಬದ ಸಡಗರ ಈ ಭಾಗದಲ್ಲಿ ಕಂಡು ಬರುತ್ತಿದ್ದು, ಸೋಮವಾರ ವಿಶೇಷವಾಗಿ ರೊಟ್ಟಿ ಪಂಚಮಿಯನ್ನು ಆಚರಿಸಲಾಯಿತು. ಜೋಳ, ಸಜ್ಜೆ ರೊಟ್ಟಿ, ಬದನೆಕಾಯಿ, ಕಾಳು ಪಲ್ಲೆ, ಚಟ್ನಿ, ಪಚಡಿ ಸೇರಿದಂತೆ ಉತ್ತರ ಕರ್ನಾಟದ ವಿವಿಧ ಖಾದ್ಯಗಳನ್ನು ತಯಾರಿಸಿ ಮನೆ, ಮನೆಗೆ ಹಂಚಿ ಸಂಭ್ರಮಿಸಲಾಗುತ್ತದೆ.

ಮಂಗಳವಾರ ನಾಗದೇವನಿಗೆ ಹಾಲು ಎರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಹುರಿದ ಅಳ್ಳು, ಅಳ್ಳಿಟ್ಟು, ಸೇರಿದಂತೆ ವಿವಿಧ ಪದಾರ್ಥಗಳನ್ನು ಎಡೆ ಹಿಡಿಯುವ ಸಂಪ್ರದಾಯ ಇದೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !