ಬೈಕ್‌ದಲ್ಲಿದ್ದ 2.16 ಲಕ್ಷ ಹಣ ಕಳವು
ಕುಷ್ಟಗಿ: ಬ್ಯಾಂಕಿನಲ್ಲಿ ಪಡೆದು ಬೈಕ್‌ದಲ್ಲಿ ಇಟ್ಟಿದ್ದ ₹2.16 ಲಕ್ಷ ಹಣವನ್ನು ಕಳ್ಳ ಲಪಟಾಯಿಸಿದ ಘಟನೆ ಬುಧವಾರ ಪಟ್ಟಣದಲ್ಲಿ ನಡೆದಿದೆ.
ತಾಲ್ಲೂಕಿನ ವಣಗೇರಿ ಗ್ರಾಮದ ಶಿವಪ್ಪ ಚೌಡ್ಕಿ ಹಣ ಕಳೆದುಕೊಂಡವರು. ಇಲ್ಲಿಯ ಎಸ್‌ಬಿಐ ಶಾಖೆಯಿಂದ ತಮ್ಮ ಖಾತೆಯಿಂದ ಹಣ ಪಡೆದು ಬೈಕ್ ಪಾಕೆಟ್‌ದಲ್ಲಿ ಇರಿಸಿದ್ದರು. ನಂತರ ಬಸ್ ನಿಲ್ದಾಣದ ಸಮೀಪದ ಕರ್ನಾಟಕ ಬ್ಯಾಂಕ್ ಶಾಖೆಯ ಬಳಿ ಬೈಕ್ ನಿಲ್ಲಿಸಿ ಒಳಗೆ ಹೋಗಿ ಬರುವಷ್ಟರಲ್ಲಿ ಬ್ಯಾಗ್‌ದಲ್ಲಿದ್ದ ಹಣ ನಾಪತ್ತೆಯಾಗಿದೆ.
ದಿಗಿಲುಗೊಂಡ ಶಿವಪ್ಪ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಕರ್ನಾಟಕ ಬ್ಯಾಂಕ್ ಶಾಖೆ ಹಾಗೂ ಬಸ್ ನಿಲ್ದಾಣದ ಬಳಿ ಇರುವ ಸಿಸಿಟಿವಿ ಕ್ಯಾಮೆರಾಗಳಲ್ಲಿನ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದು, ಅಂದಾಜು 20-25 ವರ್ಷದ ಯುವಕ ಹಣ ತೆಗೆದುಕೊಂಡು ಹೋಗಿರುವ ಚಿತ್ರಗಳು ಕ್ಯಾಮೆರಾದಲ್ಲಿ ದಾಖಲಾಗಿವೆ.
ಕಳೆದ ವರ್ಷ ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆ ಬಳಿ ಇದೇ ರೀತಿ ಬೈಕ್‌ದಲ್ಲಿ ವ್ಯಕ್ತಿಯೊಬ್ಬರು ಇರಿಸಿದ್ದ ಲಕ್ಷಾಂತರ ಹಣ ಕಳವಾಗಿತ್ತು. ಬೈಕ್‌ದಲ್ಲಿ ಹಣ ಇಡಬೇಡಿ, ಎಚ್ಚರಿಕೆಯಿಂದಿರಿ ಎಂದು ಜನರಿಗೆ ಹಲವು ಬಾರಿ ತಿಳಿವಳಿಕೆ ಮೂಡಿಸಿದರೂ ಮೇಲಿಂದ ಮೇಲೆ ಇಂಥ ಪ್ರಕರಣಗಳು ನಡೆಯುತ್ತಿವೆ. ಜನ ಜಾಗರೂಕರಾಗಿ ಇರಬೇಕು ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಎನ್.ಆರ್.ನಿಂಗಪ್ಪ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.