ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳವಂಡಿ: ಗ್ರಾಮೀಣ ಪ್ರತಿಭೆಯ ಯೋಗ ಸಾಧನೆ

ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತೆ ರೇಷ್ಮಾ
Last Updated 14 ಮಾರ್ಚ್ 2021, 4:35 IST
ಅಕ್ಷರ ಗಾತ್ರ

ಅಳವಂಡಿ: ಶಾಲೆ, ಶಿಕ್ಷಣ, ಬಸ್‌ ಸೇರಿದಂತೆ ಅನೇಕ ಸೌಕರ್ಯಗಳ ಕೊರತೆ ಮಧ್ಯೆಯೇ ಸತತ ಪರಿಶ್ರಮ ಮತ್ತು ಕಲಿಕೆ ಉತ್ಸಾಹದಿಂದ ಯೋಗದಲ್ಲಿ ಸಾಧನೆ ಮಾಡಿದ ಅಪ್ಪಟ ಗ್ರಾಮೀಣ ಪ್ರತಿಭೆ ರೇಷ್ಮಾ ವಡ್ಡಟ್ಟಿ.

ಜಿಲ್ಲಾ ಕೇಂದ್ರದಿಂದ ದೂರವಿರುವ ಅಳವಂಡಿ ಹೋಬಳಿ ವ್ಯಾಪ್ತಿಗೆ ಸೇರಿರುವ ಗ್ರಾಮೀಣ, ಕೃಷಿ, ಕೂಲಿಕಾರರ ಕುಟುಂಬದಿಂದ ಬಂದಘಟ್ಟಿರಡ್ಡಿಹಾಳ ಗ್ರಾಮದ ರೇಷ್ಮಾ ಯೋಗದಲ್ಲಿ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

ರೇಷ್ಮಾ 5ನೇ ತರಗತಿಗೆ ಸಮೀಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರವೇಶ ಪಡೆದು ಎಸ್ಸೆಸ್ಸೆಲ್ಸಿವರೆಗೆ ಅಲ್ಲೇ ವ್ಯಾಸಂಗ ಮಾಡಿದ್ದಾರೆ. ದದೇಗಲ್ ಗ್ರಾಮದ ಮೊರಾರ್ಜಿ ಕಾಲೇಜಿನಲ್ಲಿ ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡು, ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದಿದ್ದಾರೆ. ಸದ್ಯ ಕಮಲಾಪುರದ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿಎಂ.ಎಸ್ಸಿ ಯೋಗ ವಿಜ್ಞಾನ ವಿಷಯ ಆಯ್ದುಕೊಂಡು ಸ್ನಾತಕೋತ್ತರ ಪದವಿ ಪಡೆಯುವಲ್ಲಿ ನಿರತರಾಗಿದ್ದಾರೆ.

ಪ್ರಾಥಮಿಕ ಶಾಲೆಯದೈಹಿಕ ಶಿಕ್ಷಣ ಶಿಕ್ಷಕಿ ಸಾವಿತ್ರಿ ಡಂಬಳಅವರ ಮಾರ್ಗದರ್ಶನದಲ್ಲಿಯೋಗ ಕಲಿತು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಸಾಧನೆ ಮಾಡಿದ್ದಾರೆ. ಅವರ ಪ್ರತಿಭೆಯನ್ನು ಗುರುತಿಸಿದ ಶಿಕ್ಷಕಿ ಯೋಗಾಭ್ಯಾಸದ ಹೆಚ್ಚಿನ ಪಾಠ ನೀಡಿ ಸಿದ್ಧಪಡಿಸಿದ್ದಾರೆ.

ಶ್ರದ್ಧೆಯಿಂದ ಯೋಗಾಭ್ಯಾಸದ ಚಿತ್ರಪಟಗಳನ್ನುನೋಡಿಕೊಂಡು ಪ್ರತಿದಿನಬೆಳಿಗ್ಗೆ ಮತ್ತು ಸಂಜೆ ಅಭ್ಯಾಸ ಮಾಡಿದ ಯೋಗದ ವಿವಿಧ ಪಟ್ಟುಗಳನ್ನು ಕರತಲಾಮಲಕ ಮಾಡಿಕೊಂಡುತಾಲ್ಲೂಕು, ಜಿಲ್ಲಾ, ವಿಭಾಗ, ರಾಜ್ಯ, ಅಂತರರಾಜ್ಯಗಳಲ್ಲಿ ಪ್ರದರ್ಶನ ನೀಡಿ ವಿವಿಧ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.

‘ನನ್ನ ತಂದೆ, ತಾಯಿಗೆ ಎಂತಹ ಆರ್ಥಿಕ ಪರಿಸ್ಥಿತಿ ಇದ್ದರೂ ಯಾವುದೇ ಕಾರಣಕ್ಕೂ ಹಿಂಜರಿಯಲಿಲ್ಲ. ಹಾಗಾಗಿ ನಾನು ವಿಶ್ವವಿದ್ಯಾಲಯವರೆಗೆ ಶಿಕ್ಷಣಪಡೆಯಲು ಬಂದ್ದಿದೇನೆ. ಪ್ರತಿದಿನ 50 ಕಿ.ಮೀ ದೂರದ ಕೊಪ್ಪಳ ತಾಲ್ಲೂಕಿನ ಕಾಮನೂರಿನ ಮಕ್ಕಳಿಗೆ ಯೋಗದ ತರಬೇತಿ ನೀಡಿದ ತೃಪ್ತಿ ನನಗೆ ಇದೆ’ ಎಂದು ರೇಷ್ಮಾ ಹೇಳುತ್ತಾರೆ.

ಒಡಿಶಾ, ಚೆನೈ ಸೇರಿದಂತೆ ವಿವಿಧೆಡೆ ನಡೆದಅಂತರ್‌ ವಿವಿ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿಸಾಧನೆ ಮಾಡಿದ್ದಾರೆ.

ರೇಷ್ಮಾ ಪರಿಶ್ರಮಕ್ಕೆ ‘ಕನ್ನಡ ಮಾಣಿಕ್ಯ ಪ್ರಶಸ್ತಿ’, ಶಿವಮೊಗ್ಗದ ವರ್ಷಿಣಿ ಯೋಗ ಶಿಕ್ಷಣ ಸಾಂಸ್ಕೃತಿಕ ಕ್ರೀಡಾ ಟ್ರಸ್ಟ್ ಆಯೋಜಿಸುವ ರಾಷ್ಟ್ರಮಟ್ಟದ ಯೋಗಾಸನ ಸ್ಫರ್ಧೆ ಹಾಗೂ ವರ್ಲ್ಡ್‌ ರೆಕಾರ್ಡ್ ಇನ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಹಿಂದುಳಿದ ಗ್ರಾಮೀಣ ಭಾಗದ ಬಡ ಪ್ರತಿಭಾವಂತ ಈ ಯುವತಿಗೆ ಹೆಚ್ಚಿನ ಸಹಾಯ, ಸಹಕಾರ ದೊರೆತರೆ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವ ಅದಮ್ಯ ಉತ್ಸಾಹ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT