ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮಾಯಿ ಅವಧಿ ಮುಗಿದಿದೆ, ಮತ್ತೊಬ್ಬರು ಸಿಎಂ ಆಗಲಿದ್ದಾರೆ: ಸತೀಶ ಜಾರಕಿಹೊಳಿ

Last Updated 3 ಫೆಬ್ರುವರಿ 2022, 2:49 IST
ಅಕ್ಷರ ಗಾತ್ರ

ಕೊಪ್ಪಳ: ಬಿಜೆಪಿಯಲ್ಲಿ ಬಿಎಸ್‌ವೈ ಬಣ, ಆರ್‌ಎಸ್‌ಎಸ್‌ ಬಣ ಎಂಬ ಗುಂಪುಗಳು ಇವೆ. ಅದರಂತೆ ಕಾಂಗ್ರೆಸ್‌ನಲ್ಲಿಯೂ ಬಣಗಳಿಗೆ. ರಾಜಕೀಯ ಪಕ್ಷಗಳಲ್ಲಿ ಗುಂಪು ಇರುವುದು ಸ್ವಾಭಾವಿಕ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಂಪುಗಾರಿಕೆಕಾಂಗ್ರೆಸ್, ಜೆಡಿಎಎಸ್‌ನಲ್ಲೂ ಇದೆ ಎಂದು ಒಪ್ಪಿಕೊಂಡ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಆನಂದ್ ಸಿಂಗ್ ಭೇಟಿ ವೈಯಕ್ತಿಕ ಇರಬಹುದು. ಇಲ್ಲವೇ ರಾಜಕೀಯ ಇರಬಹುದು. ಅದು ಅವರಿಗೆ ಗೊತ್ತು ಎಂದರು.

ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿರುವ ಶಾಸಕರು ಹಾಗೂ ಬೇರೆ ಪಕ್ಷದ ಶಾಸಕರು ಕಾಂಗ್ರೆಸ್ ಮರಳಬಹುದು. ನವೆಂಬರ್ ವೇಳೆಗೆ ಯಾರು ಯಾರು ಪಕ್ಷಕ್ಕೆ ಬರಲಿದ್ದಾರೆ ಎಂಬುದು ಗೊತ್ತಾಗಲಿದೆ. ಯಾರೇ ಬರಲು ಇಚ್ಛಿಸಿದರೂ, ಪಕ್ಷ ತೀರ್ಮಾನ ಕೈಗೊಳ್ಳಲಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಗೆ ಬರುವುದು ಪಕ್ಷದ ವರಿಷ್ಠರಿಗೆ ಬಿಟ್ಟ ನಿರ್ಧಾರವಾಗಿದೆ ಎಂದರು.

ವಾಲ್ಮೀಕಿ ಸಮಾಜಕ್ಕೆ ಅನ್ಯಾಯ: ಶ್ರೀರಾಮುಲು ಅವರನ್ನುಉಪಮುಖ್ಯಮಂತ್ರಿ ಹಾಗೂ ನಾಯಕ ಸಮಾಜಕ್ಕೆ ಶೇ.7.5 ಮೀಸಲು ನೀಡುವುದಾಗಿ ಬಿಜೆಪಿ ನಾಯಕರು ಹೇಳಿಕೆ ನೀಡಿದ್ದರು. ಚುನಾವಣೆ ವೇಳೆ ಸಮುದಾಯದ ಮತಗಳನ್ನು ಪಡೆದಿದ್ದರು. ಆದರೆ ಈಗ ಶ್ರೀರಾಮುಲು ಅವರನ್ನು ಡಿಸಿಎಂ ಮಾಡಲಿಲ್ಲ. ಮೀಸಲಾತಿ ಹೆಚ್ಚಳ ಬಗ್ಗೆ ಮಾತನಾಡುತ್ತಿಲ್ಲ. ಬಿಜೆಪಿ ಕೊಟ್ಟ ಮಾತು ತಪ್ಪಿದೆ ಎಂದರು‌.

ಭಾವಚಿತ್ರವಿವಾದ ಅವಶ್ಯಕತೆ ಇರಲಿಲ್ಲ: ಧ್ವಜಾರೋಹಣ ಸಂದರ್ಭದಲ್ಲಿ ಅಂಬೇಡ್ಕರ್ಭಾವಚಿತ್ರ ತೆಗೆಸಿ ಧ್ವಜಾರೋಹಣ ಮಾಡಿದ ರಾಯಚೂರು ನ್ಯಾಯಾಧೀಶರ ನಡೆ ಖಂಡನೀಯ. ಇದರಲ್ಲಿ ವಿವಾದ ಅವಶ್ಯಕತೆ ಇರಲಿಲ್ಲ. ಸಂವಿಧಾನ ರಚಿಸಿದ ಅಂಬೇಡ್ಕರ್ ಅವರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯವಾಗಿದೆ. ಅಂಬೇಡ್ಕರ್ ಭಾವಚಿತ್ರ ಎಲ್ಲ ಕಡೆ ಇಡಬೇಕು. ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಮೂವರು ಮುಖ್ಯಮಂತ್ರಿ ಆಗಿದ್ದಾರೆ. ಅದರಂತೆ ಈ ಬಾರಿಯೂ ಮೂವರು ಸಿಎಂ ಆಗಲಿದ್ದಾರೆ. ಆರು ತಿಂಗಳು ಅಧಿಕಾರ ಮಾಡಿ ಎಂದು ಬೊಮ್ಮಾಯಿಗೆ ಹೇಳಿದ್ದರು. ಅದರಂತೆ ಮುಗಿದಿದೆ. ಇನ್ನು ಮುಂದೆ ಮತ್ತೊಬ್ಬರು ಆಗಲಿದ್ದಾರೆ ಎಂದು ವ್ಯಂಗ್ಯವಾಡಿದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ, ರಾಜಶೇಖರ ಹಿಟ್ನಾಳ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಾಲತಿ ನಾಯಕ್ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT