ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಲಕಟ್ಟಿ: ಸೇವಾಲಾಲ್‌ ಜಯಂತಿ ಆಚರಣೆ

Last Updated 18 ಫೆಬ್ರುವರಿ 2020, 10:01 IST
ಅಕ್ಷರ ಗಾತ್ರ

ಯಲಬುರ್ಗಾ: ತಾಲ್ಲೂಕಿನ ತರಲಕಟ್ಟಿ ಗ್ರಾಮದಲ್ಲಿ ಸೋಮವಾರ ಸಂತ ಸೇವಾಲಾಲ್‌ ಜಯಂತಿ ಆಚರಿಸಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ಲಮಾಣಿ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು,‘ಸಂತ ಸೇವಾಲಾಲ್‌ರ ವ್ಯಕ್ತಿತ್ವದ ಕುರಿತು ಸಾಕಷ್ಟು ಪ್ರಚಾರ ಮಾಡಬೇಕಿದೆ. ಸಾಕಷ್ಟು ಪವಾಡಗಳನ್ನು ಮಾಡಿದ ಪವಾಡಪುರಷ ಸೇವಾಲಾಲ್‌ ಮಹಾರಾಜರ ಜಯಂತಿ ಆಚರಣೆಯನ್ನು ಇನ್ನೂ ವಿಜೃಂಭಣೆ ಆಚರಣೆಗೆ ಪ್ರತಿಯೊಬ್ಬರು ಬದ್ಧತೆ ತೋರಬೇಕಾಗಿದೆ ಎಂದರು.

ಗ್ರಾಮದ ವಿವಿಧ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ಬಂಜಾರ ಸಮಾಜದ ಅನೇಕ ಗಣ್ಯರು ವಿಶೇಷ ವೇಷ ಭೂಷಣ ತೊಟ್ಟು ಭಾಗವಹಿಸಿದ್ದರು.

ಮುಖಂಡರಾದ ವಿರೇಶ ನಾಯಕ, ವೆಂಕೋಬ ನಾಯಕ, ಯಂಕಪ್ಪ ಲಮಾಣಿ, ಡೋಕ್ರೆಪ್ಪ ಲಮಾಣಿ, ಸಿದ್ದಪ್ಪ ಚವ್ಹಾಣ್‌, ಶ್ರೀಧರ ನಾಯಕ, ಶರಣಪ್ಪ ನಾಯಕ ಹಾಗೂ ಭರಮಪ್ಪ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT