ಗಂಗಾವತಿ: ನಗರದ ರಾಯಚೂರು ರಸ್ತೆಯ ಎಸ್‌ಬಿಐ ಬ್ಯಾಂಕ್ ಕಚೇರಿಯಲ್ಲಿ ಶುಕ್ರವಾರ ಡಿಜಿಟಲ್ ಪೇಮೆಂಟ್ಸ್ ಸಪ್ತಾಹ ನಡೆಯಿತು.
ಶಾಖಾ ವ್ಯವಸ್ಥಾಪಕ ಬ್ರಹ್ಮದೇವ ಸಿಂಗ್ ಮಾತನಾಡಿ,‘ಆಧುನಿಕತೆ ಬೆಳೆದಂತೆ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳು ಬೆಳೆಯುತ್ತಿವೆ. ಬದಲಾವಣೆಗಳಾಗುತ್ತಿವೆ. ಇದಕ್ಕೆ ತಕ್ಕಂತೆ ಬ್ಯಾಂಕ್ ವ್ಯವಹಾರಗಳಲ್ಲಿ ಡಿಜಿಟಲ್ ಪೇಮೆಂಟ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಹೇಳಿದರು.
ಡಿಜಿಟಲ್ ಯುಗದಲ್ಲಿರುವ ನಾವು ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್ ಮೂಲಕ ಡಿಜಿಟಲ್ ವ್ಯವಹಾರ ನಡೆಸುವುದು ಸೂಕ್ತ ಎಂದರು.
ಎಸ್‌ಬಿಐ ಬ್ಯಾಂಕ್‌ನ ಆರ್ಥಿಕ ಸಾಕ್ಷರತಾ ಸಲಹೆಗಾರ ಟಿ.ಆಂಜನೇಯ, ರಾಘವೇಂದ್ರ ಶರ್ಮಾ, ಎಂ.ರಮೇಶ ಹಾಗೂ ಸುರೇಶ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.