ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳ ಕೌತಕ ಹೆಚ್ಚಿಸಲು ವಿಜ್ಞಾನ ಹಬ್ಬ ಆಯೋಜನೆ’

ವಿವಿಧ ಶಾಲೆಗಳಿಂದ ವಿಜ್ಞಾನ ಮಾದರಿಗಳ ಪ್ರದರ್ಶನ
Last Updated 5 ಡಿಸೆಂಬರ್ 2019, 10:00 IST
ಅಕ್ಷರ ಗಾತ್ರ

ಹನುಮಸಾಗರ: ‘ಮಕ್ಕಳು ಕೇವಲ ಶಾಲೆಯ ಕೊಠಡಿಯಲ್ಲಿ ಕುಳಿತು ಪಾಠ ಕೇಳುವ ಬದಲಾಗಿ, ಪ್ರಯೋಗಗಳನ್ನು ಮಾಡಿ ಅದರೊಂದಿಗೆ ಆಡಿ ಹಾಡುತ್ತಾ ಖುಷಿಪಡುವ ಕಾರ್ಯಕ್ರಮ ಈ ಮಕ್ಕಳ ವಿಜ್ಞಾನ ಹಬ್ಬವಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಭೀಮಣ್ಣ ಅಗಸಿಮುಂದಿನ ಹೇಳಿದರು.

ಇಲ್ಲಿನ ಕುರುಬಗೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳ ವಾರ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಮಕ್ಕಳ ವಿಜ್ಞಾನ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖಂಡ ಬಸವರಾಜ ಹಳ್ಳೂರ ಮಾತನಾಡಿ, ‘ಮಕ್ಕಳಲ್ಲಿ ಪ್ರಶ್ನೆಯ ಪ್ರಜ್ಞೆ ಮೂಡಿಸಲು ನೆರವಾಗಬಲ್ಲ ಈ ಮಕ್ಕಳ ವಿಜ್ಞಾನ ಹಬ್ಬ, ಮಕ್ಕಳಲ್ಲಿ ಸೃಜನಶೀಲತೆ, ಪ್ರಶ್ನಿಸುವ ಮನೋಭಾವ, ಪ್ರಾಯೋಗಿಕ ಕಲಿಕೆಗೆ ಪೂರಕವಾಗುತ್ತದೆ. ಅಲ್ಲದೆ ಮೌಲ್ಯಗಳನ್ನು ಬೆಳೆಸುವ, ಹಿಂಜರಿಕೆಯನ್ನು ಅಳಿಸಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತದೆ. ವಿಜ್ಞಾನ ಸೇರಿದಂತೆ ಭಾಷೆ, ಗಣಿತ, ಕಲೆ, ನಾಟಕ, ನೃತ್ಯ ಎಲ್ಲವನ್ನು ಒಳಗೊಂಡು ಮಕ್ಕಳು ವೈಜ್ಞಾನಿಕವಾಗಿ ಕಲಿಕೆಗೆ ಅನುಕೂಲವಾಗುತ್ತದೆ’ ಎಂದು ಹೇಳಿದರು.

ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಶೈಲ ಸೋಮನಕಟ್ಟಿ ಮಾತನಾಡಿ, ಈ ಹಬ್ಬದಲ್ಲಿ ನಾಲ್ಕು ವಿಭಾಗಗಳನ್ನು ಮಾಡಲಾಗಿದ್ದು, ಸೌರವ್ಯೂಹಕ್ಕೆ ಸಂಬಂಧಿಸಿದ ಚುಕ್ಕಿ ಚಂದ್ರಮ, ವಿಜ್ಞಾನ ಅನ್ವೇಷಿಸುವ ‘ಮಾಡಿ ಆಡು’, ಭಾಷಾ ಜ್ಞಾನ ಬೆಳೆಸುವ ‘ಆಡು-ಹಾಡು’, ಸುತ್ತಲಿನ ಪರಿಸರ, ಸಾಮಾಜಿಕ ಅಧ್ಯಯನಕ್ಕೆ ಪೂರಕವಾಗಿ ‘ಊರು ತಿಳಿಯೋಣ’ ಕಾರ್ಯಕ್ರಮಗಳನ್ನು ಜೋಡಿಸಲಾಗಿದೆ. ಸರ್ಕಾರಿ ಶಾಲೆಗ ಳೆಡೆಗೆ ಜನರಲ್ಲಿ ಪ್ರೀತಿ ಬೆಳೆಸುವ ಉದ್ದೇಶ ದಿಂದ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆಯಲ್ಲಿ ಸಂಘಟಿಸ ಲಾಗುತ್ತಿದೆ’ ಎಂದು ಹೇಳಿದರು.

ಪೇಪರ್‌ನಿಂದ ಟೋಪಿ, ವಿವಿಧ ತರಹದ ಹೂವುಗಳು, ಗಣಿತ ಕಲಾಕೃತಿಗಳು ಹೀಗೆ ಹತ್ತಾರು ಕಲಾಕೃತಿಗಳನ್ನು ಮಕ್ಕಳು ತಯಾರಿಸಿ ಅತಿಥಿಗಳಿಗೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಚಂದಪ್ಪ ವಾಲ್ಮೀಕಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ ಸದಸ್ಯೆ ಶಕೀಲಾಬೇಗಂ ಡಲಾಯಿತ್, ಎಸ್‍ಡಿಎಂಸಿ ಅಧ್ಯಕ್ಷ ಶಿವಪ್ಪ ಬಿಂಗಿ, ಪ್ರಮುಖರಾದ ಮಹಾಂತೇಶ ಅಗಸಿಮುಂದಿನ, ಮೈನುದ್ದೀನಸಾಬ ಖಾಜಿ, ಸಂಗಯ್ಯ ವಸ್ತ್ರದ, ಸಕ್ರಪ್ಪ ಬಿಂಗಿ, ನೂರಸಾನ ಇಟಗಿ, ರಾಜೇಂದ್ರ ಪಂತ, ಪರಸಪ್ಪ ಹೊಸಮನಿ. ದ್ಯಾಮಣ್ಣ ಬಿಂಗಿ, ಮಾರುತಿಸಾ ರಂಗ್ರೇಜ್, ಮುಖ್ಯಶಿಕ್ಷಕ ಶರಣಪ್ಪ ನಾಗೂರ, ಎಮ್.ಎಸ್.ಬಡದಾನಿ, ರಾಜೇಂದ್ರರ ಬೆಳ್ಳಿ, ಶ್ರೀನಿವಾಸ ಜಹಗೀರದಾರ, ಮಹ್ಮದ್ ರಿಯಾಜ್ ಖಾಜಿ, ಭಾಷುಸಾಬ ದೋಟಿಹಾಳ, ವಿರುಪಾಕ್ಷಪ್ಪ ಅಂಗಡಿ, ಎಸ್‍ಡಿಎಂ ಸದಸ್ಯರು ಇದ್ದರು.

ಮುಖ್ಯಶಿಕ್ಷಕ ಶರಣಪ್ಪ ನಾಗೂರ ಸ್ವಾಗತಿಸಿದರು. ವಿದ್ಯಾರ್ಥಿಗಳು ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT