ಗಂಗಾವತಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿ ಬಗ್ಗೆ ಸಿ.ಎಂ ಸಿದ್ದರಾಮಯ್ಯ
ಪಾಕಿಸ್ತಾನದೊಂದಿಗೆ ಯುದ್ಧ ಬೇಡ, ಶಾಂತಿಯಿಂದ ದೇಶದ ಭದ್ರತೆಗೆ ಮುಂದಾಗಿ ಎಂದು ನೀಡಿದ ಹೇಳಿಕೆ ಸಮಂಜಸವಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್ ಶ್ರೀನಾಥ ಅಭಿಪ್ರಾಯಪಟ್ಟಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಕಾಶ್ಮೀರದಲ್ಲಿ ನಾಡಿನ ಪ್ರವಾಸಿಗರನ್ನು ಉಗ್ರರು ಗುಂಡಿಟ್ಟು ಕೊಲೆ ಮಾಡಿದ್ದು, ಉಗ್ರರನ್ನು ಮಟ್ಟಹಾಕಲು ಕೇಂದ್ರ ಸರ್ಕಾರ ವಿಶೇಷ ತಂಡಗಳು ರೂಪಿಸಿ, ಕಾರ್ಯಾಚರಣೆಗೆ ಇಳಿಸಿದೆ. ಈ ಕಾರ್ಯಕ್ಕೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕ ರಾಹುಲ್ ಗಾಂಧಿ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈಗ ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆ ಅವರ ವೈಯಕ್ತಿಕ ವಿಚಾರವೇ ಹೊರತು ಪಕ್ಷದ್ದಲ್ಲ’ ಎಂದರು.

‘ದೇಶ ಅಂತ ಬಂದಾಗ ಯಾವ ಪಕ್ಷವು ಇಲ್ಲ, ಧರ್ಮವು ಇಲ್ಲ, ನಾವೆಲ್ಲರೂ ಒಂದೇ. ಉಗ್ರರ ಅಂತ್ಯಕ್ಕೆ ನಮ್ಮೆಲ್ಲರ ಬೆಂಬಲವಿದೆ. ಸಿಎಂ ಅವರು ಹೇಳಿಕೆ ಹಿಂಪಡೆದು, ಕೇಂದ್ರದ ನಿಲುವಿಗೆ ಬೆಂಬಲಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.