ಆಶ್ರಯ ಮನೆ ಮಾಲೀಕರಿಗೆ ನಿವೇಶನ: ನಿರ್ಣಯ

7
ಕನಕಗಿರಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ

ಆಶ್ರಯ ಮನೆ ಮಾಲೀಕರಿಗೆ ನಿವೇಶನ: ನಿರ್ಣಯ

Published:
Updated:
Deccan Herald

ಕನಕಗಿರಿ: ನವ ಗ್ರಾಮ ಯೋಜನೆಯ ಫಲಾನುಭವಿಗಳಿಗೆ ನಿವೇಶನ ಮತ್ತು ಆಶ್ರಯ ಮನೆಗಳನ್ನು ವಿತರಿಸಲು ಶುಕ್ರವಾರ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ರವಿ ಭಜಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಾಧಿಕಾರಿ ಮಹೇಶ ನಿಡಶೇಷಿ ಅವರು ನವ ಗ್ರಾಮ ಯೋಜನೆ ವಿಷಯ ಪ್ರಸ್ತಾಪಿದರು. ಅರ್ಹ ಫಲಾನುಭವಿಗಳಿಗೆ ನೀಡಲು ಸದಸ್ಯರು ಕೋರಿದರು.

ರವಿ ಭಜಂತ್ರಿ ಮಾತನಾಡಿ, ‘ಕಲಕೇರಿ ಗ್ರಾಮದ ರಸ್ತೆಯಲ್ಲಿರುವ ಯಂಕೋಬಪ್ಪ ಆರೇರ್ ಮತ್ತು ಕೆ.ಮಹಾಬಳೇಶ್ವರ ಸ್ವಾಮಿ ಅವರ ಹೊಲವನ್ನು ಸರ್ಕಾರ 2002ರಲ್ಲಿ ನವ ಗ್ರಾಮ ಯೋಜನೆಯಡಿ ಖರೀದಿಸಿ ನಿವೇಶನದ ಜತೆಗೆ ಆಶ್ರಯ ಮನೆ ವಿತರಿಸಿತ್ತು’ ಎಂದರು.

‘ಸ್ವಾಮೇರ ಹೊಲದಲ್ಲಿ ನಿವೇಶನ ಹಾಗೂ ಆಶ್ರಯ ಮನೆ ನೀಡಿದರೆ ಕಲಕೇರಿ ರಸ್ತೆಯಲ್ಲಿ ಬರೀ ನಿವೇಶನದ ಆದೇಶ ಪ್ರತಿ ನೀಡಲಾಗಿತ್ತು. ಫಲಾನುಭವಿಗಳಿಗೆ ತಮ್ಮ ನಿವೇಶನ ಯಾವುದು ಎಂಬುದು ಗೊತ್ತಿರಲಿಲ್ಲ. ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳ ಸಹಕಾರ ಪಡೆದು ಹಂಚಿಕೆಯಾದ ನಿವೇಶನಗಳ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದರು.

‘ಗೋರಳಕೇರಿ ದುರ್ಗಮ್ಮ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಬಡವರಿಗೆ ನಿವೇಶನ ಹಂಚಿಕೆಗೆ ಭೂಮಿ ಖರೀದಿಸಿ ನಿವೇಶನದ ಆದೇಶ ಪತ್ರ ನೀಡಲಾಗಿದೆ. ಸದ್ಯ ನಿವೇಶನದ ಜಾಗ ರುದ್ರಸ್ವಾಮಿ ಶಾಲೆಯ ಆವರಣದಲ್ಲಿದೆ. ಈ ಹಿಂದೆ ನಿರ್ಣಾಯವಾದಂತೆ ಶಾಲೆಯ ಆವರಣದ ಬದಲಾಗಿ ಬೇರೆ ಸ್ಥಳದಲ್ಲಿಯೂ ಫಲಾನುಭವಿಗಳಿಗೆ ನಿವೇಶನ ನೀಡಿಲ್ಲ’ ಎಂದರು.

‘ಒಂದು ವರ್ಷದ ಹಿಂದೆ ವಾರ್ಡ್‌ನಲ್ಲಿ ದೀಪಾವಳಿ, ಮೊಹರಂ, ಜಾತ್ರೆ ವೇಳೆ ಕೈಗೊಂಡ ಅಭಿವೃದ್ಧಿಗೆ ಕಾಮಗಾರಿಗೆ ಅಧಿಕಾರಿಗಳು ಅನುದಾನ ಬಿಡುಗಡೆ ಮಾಡದ ಕಾರಣ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ’ ಎಂದು ಸದಸ್ಯ ಕೆ. ಸುಭಾಸ ದೂರಿಗೆ ಸದಸ್ಯರಾದ ಶರಣಬಸವ ಭತ್ತದ, ಮಂಜುನಾಥ ರಡ್ಡಿಮಾದಿನಾಳ ಧ್ವನಿಗೂಡಿಸಿದರು.

‘ಸಾಮಾನ್ಯ ನಿಧಿಯಲ್ಲಿ ಅನುದಾನ ನೀಡಿ ವಾರ್ಡ್‌ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ತೀರ ಅವಶ್ಯಕತೆ ಇರುವ ಕಡೆಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ರವಿ ಭಜಂತ್ರಿ ತಿಳಿಸಿದರು.

ಕಳೆದ 11 ತಿಂಗಳಿಂದಲೂ ವೇತನ ಇಲ್ಲದೆ ಪರದಾಟ ನಡೆಸುತ್ತಿದ್ದೇವೆ. ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಸಾಧ್ಯವಾದಷ್ಟು ಬೇಗ ವೇತನ ಬಿಡುಗಡೆ ಮಾಡಿ.ಇಲ್ಲದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಪೌರಕಾರ್ಮಿಕ ಅಳಲು ತೋಡಿಕೊಂಡರು. ತಾಂತ್ರಿಕ ಸಮಸ್ಯೆ ಬಗೆಹರಿಸಿಕೊಂಡು ತ್ವರಿತ ಗತಿಯಲ್ಲಿ ವೇತನ ಪಾವತಿಸಲು ಸದಸ್ಯರು ಅಧಿಕಾರಿಗೆ ಒತ್ತಾಯಿಸಿದರು.

ನೂಲ್ವಿ ಚಂದಯ್ಯ ವೃತ್ತ ನಿರ್ಮಾಣಕ್ಕೆ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಹುಲಗಪ್ಪ ವಾಲೇಕಾರ, ಸದಸ್ಯರಾದ ತಿಪ್ಪಣ್ಣ ನಾಯಕ, ರವೀಂದ್ರ ಸಜ್ಜನ್, ಹುಸೇನಸಾಬ ಸೂಳೇಕಲ್, ಮಂಜುನಾಥ ಗಡಾದ ಇದ್ದರು.      

ತ್ಯಾಜ್ಯ ವಿಲೇವಾರಿ ಘಟಕಕ್ಕೆ 18 ಎಕರೆ ಭೂಮಿ ಬಂಕಾಪುರ ಗ್ರಾಮದ ಬಳಿ ಗುರುತಿಸಲಾಗಿದೆ. ಬಡವರಿಗೆ ಉಚಿತ ನಿವೇಶನ ವಿತರಣೆಗೆ ಸರ್ಕಾರ ಬದ್ದವಿದೆ. 100 ಎಕರೆ ಭೂಮಿ ಲಭ್ಯವಿದ್ದರೆ, ಖರೀದಿಗೆ ಸಿದ್ಧ
ಮಹೇಶ ನಿಡಶೇಷಿ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !