ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಭದ್ರ ಜೀವನಕ್ಕೆ ಶಿಕ್ಷಣವೇ ಬುನಾದಿ

ಸ್ಮಾರ್ಟ್‌ಕ್ಲಾಸ್‌ ಉದ್ಘಾಟನೆ: ಹಿರಿಯ ವಕೀಳ ವಿ.ಎಂ.ಭೂಸನೂರಮಠ ಅಭಿಮತ
Last Updated 19 ಸೆಪ್ಟೆಂಬರ್ 2021, 13:59 IST
ಅಕ್ಷರ ಗಾತ್ರ

ಮುನಿರಾಬಾದ್‌: ‘ವ್ಯಕ್ತಿಯ ಜೀವನ ವಿಕಾಸಕ್ಕೆ ಶಿಕ್ಷಣ ಬುನಾದಿಯಾಗಿದೆ’ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಸದಸ್ಯ ವಿ.ಎಂ.ಭೂಸನೂರಮಠ ಅಭಿಪ್ರಾಯಪಟ್ಟರು.

ಸಮೀಪದ ಹಿಟ್ನಾಳ ಗ್ರಾಮದ ಎಸ್‌ಆರ್‌ಎಸ್‌ಎಂ ಪ್ರೌಢ ಶಾಲೆಯಲ್ಲಿ ಶುಕ್ರವಾರ ಸ್ಮಾರ್ಟ್‌ಕ್ಲಾಸ್‌ ಉದ್ಘಾಟಿಸಿ ಅವರು ಮಾತನಾಡಿದರು.

ಶಾಲೆ ಒಂದು ಸಾಮಾಜಿಕ ಪರಿವರ್ತನೆಯ ಕೇಂದ್ರ ಎಂದು ನಂಬಿರುವ ನಮ್ಮ ಸಂಘದ ಅಧ್ಯಕ್ಷರು, ಕಲಬುರ್ಗಿಯ ವಿಕಾಸ ಅಕಾಡೆಮಿಯ ಅಧ್ಯಕ್ಷರೂ ಆಗಿರುವ ಡಾ. ಬಸವರಾಜ ಪಾಟೀಲ ಸೇಡಂ ಅವರ ನೇತೃತ್ವದಲ್ಲಿ ಇಡೀ ಕಲ್ಯಾಣ ಕರ್ನಾಟಕದ ಶೈಕ್ಷಣಿಕ, ಆರೋಗ್ಯ, ಕೃಷಿ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಸಂಘ ಶ್ರಮಿಸುತ್ತಿದೆ ಎಂದರು.

ಕೊಪ್ಪಳ ತಾಲ್ಲೂಕಿನ 12 ಶಾಲೆಗಳಲ್ಲಿ ಸ್ಮಾರ್ಟ್‌ಕ್ಲಾಸ್ ಅಳವಡಿಕೆಗೆ ಮಂಜೂರಾತಿ ಸಿಕ್ಕಿದೆ. ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಮಹಿಳೆಯರ ಸ್ವಾವಲಂಬನೆಗೆ ಕೌಶಲ ಕೇಂದ್ರ, ಕಲಿಕಾ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ. ಕಿರು ಉದ್ಯಮ ಘಟಕ, ಸಮಗ್ರ ಕೃಷಿ ಕೈಗೊಳ್ಳುವ ರೈತರಿಗೆ ಶೇ.70 ರಷ್ಟು ಆರ್ಥಿಕ ಸಹಾಯ ನೀಡಲಾಗುವುದು. ಸರ್ಕಾರದ ಈ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.

ಎಸ್‌ಆರ್‌ಎಸ್‌ಎಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಕೆ.ರಮೇಶ ಮಾತನಾಡಿ,‘ಬದಲಾದ ಶಿಕ್ಷಣ ವ್ಯವಸ್ಥೆ, ಸ್ಪರ್ಧಾತ್ಮಕ ಯುಗದಲ್ಲಿ ಸ್ಮಾರ್ಟ್‌ಕ್ಲಾಸ್ ಅವಶ್ಯ’ ಎಂದರು.

ಆಡಳಿತ ಮಂಡಳಿಯ ಶ್ರೀನಿವಾಸ ಜವಳಿ, ಅಶೋಕ ಈಳಿಗೇರ, ವಿಜಯಕುಮಾರ ಮಾಲಿಪಾಟೀಲ್, ಪಿಡಿಒ ಜಂಬಣ್ಣ ನಂದಾಪುರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗೌಸ್ ಮೋಹಿದ್ದಿನ್, ಸದಸ್ಯೆ ರತ್ನಮ್ಮ ಸುರೇಶ್ ವಡ್ಡರ್, ಚಂದ್ರಪ್ಪ ನಾಗಲೀಕರ್, ನಿಂಗಪ್ಪ ಹೊಸಳ್ಳಿ, ಪಿಯು ಕಾಲೇಜು ಪ್ರಾಚಾರ್ಯ ಸಿದ್ದರಡ್ಡಿ ಮೇಟಿ, ಮುಖ್ಯಶಿಕ್ಷಕ ಜೆ.ಕೃಷ್ಣಮೂರ್ತಿ, ಸಹಶಿಕ್ಷಕರ ಸಂಘದ ಮಾರ್ತಾಂಡ ರಾವ್ ದೇಸಾಯಿ, ಹಿರಿಯ ಶಿಕ್ಷಕ ಬಿ.ಫಣಿರಾಜ್, ಜಿಲ್ಲಾ ಸಂಯೋಜಕ ಶರಣಪ್ಪ ಸಿಂದೋಗಿ ಹಾಗೂ ತಾಲ್ಲೂಕು ಸಂಯೋಜಕ ವೀರೇಶ ಹಾಲಗುಂಡಿ ಇದ್ದರು. ಚಂದ್ರಪ್ಪ ಅರಕೇರಿ ನಿರೂಪಿಸಿದರು. ಕುಬೇರಪ್ಪ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT