ಕೊಪ್ಪಳ: ಜಿಲ್ಲೆಯಾದ್ಯಂತ ಬುಧವಾರ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ–1 ಸರಾಗವಾಗಿ ನಡೆದಿದ್ದು, ಪ್ರಥಮ ಭಾಷೆಗೆ 379 ವಿದ್ಯಾರ್ಥಿಗಳು ಗೈರಾಗಿದ್ದರು. ಜಿಲ್ಲೆಯ 74 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದವು.

ಜಿಲ್ಲಾಕೇಂದ್ರದ ವಿವಿಧ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಕರು, ಶಾಲಾ ಸಿಬ್ಬಂದಿ, ಎಸ್ಡಿಎಂಸಿ ಸದಸ್ಯರು ಹೂಮಳೆಗೆರೆದು ಸ್ವಾಗತಿಸಿದರು. ಕೈಕುಲುಕಿ ನಿರ್ಭಿತಿಯಿಂದ ಪರೀಕ್ಷೆ ಬರೆಯಿರಿ, ಸದಾ ಆತ್ಮವಿಶ್ವಾಸ ಜೊತೆಯಲ್ಲಿ ಇರಲಿ ಎಂದು ಧೈರ್ಯ ತುಂಬಿದರು. ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿನ ಪರೀಕ್ಷಾ ಕೇಂದ್ರದ ಹೊರಗೆ ಬುಧವಾರ ಪುಸ್ತಕ ಹಿಡಿದು ಓದುತ್ತ ಕುಳಿತಿದ್ದ ವಿದ್ಯಾರ್ಥಿಗಳ ಚಿತ್ರಣವೂ ಕಂಡುಬಂದಿತು. ಹಲವು ಕಡೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಪೆನ್ನು ನೀಡಿ ಬರಮಾಡಿಕೊಂಡರು.

ಅಳವಂಡಿ ವರದಿ: ಇಲ್ಲಿನ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಮುದುಕನಗೌಡ ಗಾಳಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಸುಗಮವಾಗಿ ನಡೆಯಿತು.

ಮುದಕನಗೌಡ ಗಾಳಿ ಬಾಲಕಿಯರ ಪ್ರೌಢಶಾಲೆಯ ಕೇಂದ್ರದಲ್ಲಿ ಒಟ್ಟು 219 ವಿದ್ಯಾರ್ಥಿಗಳು ಪೈಕಿ 214 ವಿದ್ಯಾರ್ಥಿಗಳ ಹಾಗೂ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 293 ವಿದ್ಯಾರ್ಥಿಗಳ ಪೈಕಿ 283 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದರು.

ಪರೀಕ್ಷಾ ಕೇಂದ್ರಗಳ ಸುತ್ತ ಪಿಎಸ್ಐ ಪ್ರಹ್ಲಾದ್ ನಾಯಕ ಅವರ ನೇತೃತ್ವದಲ್ಲಿ ಪೋಲಿಸ್ ಬಿಗಿ ಭದ್ರತೆ ಒದಗಿಸಲಾಗಿತ್ತು. ಮುಖ್ಯ ಅಧೀಕ್ಷಕರಾದ ವೀರಣ್ಣ ಮಟ್ಟಿ, ಯಲ್ಲಪ್ಪ ಬಂಡಿ, ಪ್ರಶ್ನೆ ಪತ್ರಿಕೆ ಪಾಲಕರಾದ ಸಂಪಕ್ಕ ಗೊಲ್ಲರ, ರೇಚಪ್ಪ ಕಮತರ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.