ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಕನೂರು | ಮಳೆಗೆ ತಂದ ಸಂಕಟ: ಅಪಾರ ಬೆಳೆನಾಶ

Published 9 ನವೆಂಬರ್ 2023, 16:37 IST
Last Updated 9 ನವೆಂಬರ್ 2023, 16:37 IST
ಅಕ್ಷರ ಗಾತ್ರ

ಕುಕನೂರು: ಬುಧವಾರ ರಾತ್ರಿ ಸುರಿದ ಗುಡುಗು ಸಹಿತ ಮಳೆಗೆ ಸೊಂಪಾಗಿ ಬೆಳೆದಿದ್ದ ಚಂಡು ಹೂ, ಗೋಧಿ, ಜೋಳ, ಕಡಲೆ ಸಂಪೂರ್ಣ ನೆಲಕಚ್ಚಿವೆ.

ತಾಲ್ಲೂಕಿನ ಗಾವರಾಳ, ಬೆರವಟ್ಟಿ, ಬಿನ್ನಾಳ, ವೀರಾಪುರ ಗ್ರಾಮಗಳಲ್ಲಿ ರೈತರು ಹಿಂಗಾರು ಬೆಳೆಗಳಾದ ಗೋಧಿ, ಕಡಲೆ, ಜೋಳ, ಚಂಡು ಹೂವು ಬೆಳೆಯನ್ನು ಬೆಳೆಯುತ್ತಿದ್ದಾರೆ. ಬಿರುಗಾಳಿ ಸಹಿತ ಮಳೆಗೆ ಬೆಳೆ ಹಾನಿಯಾಗಿದೆ. ಕೈಗೆ ಬಂದ ಬೆಳೆ ಕೆಲವು ದಿನಗಳಲ್ಲಿ ಫಲ ನೀಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ.

ಚಂಡು ಹೂವು ಬೆಳೆ ನಾಶ: ಒಂದು ಎಕರೆ ಪ್ರದೇಶದಲ್ಲಿ ಸಮೃದ್ಧವಾಗಿ ಬೆಳೆದಿದ್ದ ಚಂಡು ಹೂವು ಬೆಳೆ, ರಾತ್ರಿ ಸುರಿದ ಮಳೆಗೆ ಸಂಪೂರ್ಣ ನೆಲಕಚ್ಚಿದೆ. ₹60 ರಿಂದ ₹70 ಸಾವಿರ ಖರ್ಚು ಮಾಡಿ ಸಸಿಗಳನ್ನು ನೆಟ್ಟಿದ್ದ ರೈತ ಆನಂದ ಕಳ್ಳಿಮನಿ ಅವರು ದೀಪಾವಳಿ ಹಬ್ಬದಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆಯಲ್ಲಿದ್ದರು. ಆದರೆ ಬೆಳೆಹಾನಿಯಿಂದ ಆತಂಕ ಮೂಡಿಸಿದೆ.

ಮಳೆಗೆ ಬೆಳೆ ಹಾನಿಯಾಗಿದ್ದರೂ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವ ಕೆಲಸ ಮಾಡಿಲ್ಲ. ಜೊತೆಗೆ ಬೆಳೆ ನಾಶವಾಗಿರುವ ರೈತರ ತೋಟಗಳಿಗೆ ಭೇಟಿ ನೀಡಿ ಸಮಗ್ರ ಮಾಹಿತಿ ಪಡೆದು ರೈತರ ನೆರವಿಗೆ ತೋಟಗಾರಿಕೆ ಅಧಿಕಾರಿಗಳು ಕೂಡ ಮುಂದಾಗದೇ ಇರುವುದು ಇಲ್ಲಿನ ರೈತರನ್ನ ಕೆರಳಿಸಿದೆ.

ಕೈಗೆ ಬರಬೇಕಿದ್ದ ತುತ್ತು, ಬಾಯಿಗೆ ಬರಲಿಲ್ಲ ಎಂದು ರೈತರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ. ಜೊತೆಗೆ ಬೆಳೆಹಾನಿಯಾಗಿರೊ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.

ಚಂಡುವನ್ನು ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದೆ ನಿನ್ನೆ ರಾತ್ರಿ ಸುರಿದ ಮಳೆಯಿಂದ ಎಲ್ಲಾ ಗಿಡಗಳು ನೆಲಕ್ಕ ಬಿದ್ದುಬಿಟ್ಟವ್ರೆ ಏನು ಮಾಡಬೇಕು ರೀ. ಸಾಲ ಸೋಲ ಮಾಡಿ ಬೆಳೆದಿದ್ದೆ. ಇನ್ನೇನು ಮೂರ್ನಾಲ್ಕು ದಿನದಲ್ಲಿ ದೀಪಾವಳಿಗೆ ಮಾರುತಿದ್ದ ಚಂಡು ಹೂ ಸಂಪೂರ್ಣ ಹಾಳಾಗ್ಹೋಗೈತ್ರಿ.
ಆನಂದ ಕಳ್ಳಿಮನಿ ರೈತ ಗಾವರಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT