ಹರಿಗೋಲು ಸ್ಫರ್ಧೆ

7

ಹರಿಗೋಲು ಸ್ಫರ್ಧೆ

Published:
Updated:

ಗಂಗಾವತಿ: ಗಂಗಾ ಜಯಂತಿ ಪ್ರಯುಕ್ತ ತಾಲ್ಲೂಕಿನ ಚಿಕ್ಕಜಂತಕಲ್ ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ಬುಧವಾರ ಗಂಗಾಮತ ಸಮಾಜದ ಯುವಕರಿಗೆ ಹರಿಗೋಲು ಓಡಿಸುವ ಸ್ಫರ್ಧೆ ಹಮ್ಮಿಕೊಳ್ಳಲಾಗಿತ್ತು.

ತುಂಗಭದ್ರಾ ನದಿಯ ಗಂಗಾವತಿ ತಾಲ್ಲೂಕಿನ ಚಿಕ್ಕಿಜಂತಕಲ್ ದಡದಿಂದ ಹೊಸಪೇಟೆ ತಾಲ್ಲೂಕಿನ ಕಂಪ್ಲಿ ಪಟ್ಟಣದ ಮತ್ತೊಂದು ದಡದ ಮಧ್ಯೆ ಇರುವ ಸುಮಾರು 380 ಮೀಟರ್ ದೂರ ತಲುಪಲು ಹುಟ್ಟನ್ನು ಹಾಕಿ ಹರಿಗೋಲು ಓಡಿಸುವ ಸ್ಫರ್ಧೆ ಏರ್ಪಡಿಸಲಾಗಿತ್ತು.

10ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಹಳೇ ಆಯೋಧ್ಯೆ ಗ್ರಾಮದ ಗಂಗಯ್ಯ ಪ್ರಥಮ ಹಾಗೂ ಸುಭಾಷ್‌ ಚಂದ್ರ ದ್ವಿತೀಯ ಸ್ಥಾನ ಪಡೆದರು. 50 ಗ್ರಾಂ ತೂಕದ ಬೆಳ್ಳಿಯ ಕಡಗ ಪ್ರಥಮ ಬಹುಮಾನ, 25 ಗ್ರಾಂ ಬೆಳ್ಳಿಯ ಕಡಗ ಎರಡನೇ ಬಹುಮಾನವಾಗಿ ನೀಡಲಾಯಿತು.

ಜಯಂತಿ ಪ್ರಯುಕ್ತ ಗಂಗಾದೇವಿ ಭಾವಚಿತ್ರಕ್ಕೆ ತುಂಗಭದ್ರಾ ನದಿಯಲ್ಲಿ ಪೂಜೆ ಸಲ್ಲಿಸಲಾಯಿತು. ಕುಂಭ ,ಕಳಸ ದೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಪ್ರಮು ಖರಾದ ರೇಣುಕನಗೌಡ ಅಯೋಧ್ಯೆ, ನಾಗರಾಜ, ವಿರುಪಣ್ಣ, ಭೀಮನಾಯಕ, ಫಕೀರಪ್ಪ, ಪರಸಪ್ಪ, ಬಾಬುಸುಭಾನಿ, ಈರಣ್ಣ ಕಬ್ಬೇರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !