ತಾವರಗೇರಾ: ‘ನಮ್ಮ ಇಲಾಖೆ ಕಚೇರಿಗೆ ಬರುವ ಗ್ರಾಹಕರು, ರೈತರಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ದಾಹ ನೀಗಿಸಲು ಅರವಟಿಗೆ ವ್ಯವಸ್ಥೆ ಮಾಡಲಾಗಿದೆ. ಸುತ್ತಮುತ್ತಲಿನ ರೈತರು ವಿದ್ಯುತ್ ಬಿಲ್ ಪಾವತಿಗಾಗಿ ಬರುವ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಕುಷ್ಟಗಿ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೆಂಚಪ್ಪ ಹೇಳಿದರು.

ಪಟ್ಟಣದ ಕುಷ್ಟಗಿ ರಸ್ತೆಯ ಜೆಸ್ಕಾಂ ಶಾಖಾ ಕಚೇರಿಯಲ್ಲಿ ಏರ್ಪಡಿಸಿದ್ದ ನೀರಿನ ಅರವಟಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಂತರ ಸ್ಥಳೀಯ ಜೆಸ್ಕಾಂ ಶಾಖಾಧಿಕಾರಿ ರಶ್ಮಿ ಚವಾಣ್ ಮಾತನಾಡಿ, ‘ಇಲಾಖೆಯ ಸಿಬ್ಬಂದಿ ಸಹಕಾರದಿಂದ ಗ್ರಾಹಕರಿಗಾಗಿ ಇಂತಹ ನೀರಿನ ಅರವಟಿಗೆ ವ್ಯವಸ್ಥೆ ಮಾಡಲಾಗಿದೆ. ಬೇಸಿಗೆ ದಿನಗಳು ಇರುವದರಿಂದ ಜನರು ಸದುಪಯೋಗ ಪಡೆಯಬೇಕು’ ಎಂದು ಹೇಳಿದರು.

ಜೆಸ್ಕಾಂ ಸಿಬ್ಬಂದಿ ರಾಚಯ್ಯ ಹಿರೇಮಠ, ಶರಣಪ್ಪ, ಬೀರಪ್ಪ, ಮಹಿಬೂಬ ಪೀರಾ, ರಹೀಮ್, ವೀರಣ್ಣ ನವೀನಸಿಂಗ್, ಸಂಗಯ್ಯ, ಶರಣಪ್ಪ ಅಂಗಡಿ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.