ತಾವರಗೇರಾ: ಇಲ್ಲಿನ ಕಿಲ್ಲಾರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾರಿನಾಳ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ಗ್ರಾಮಸ್ಥರು ನಿತ್ಯ ಎದುರಿಸುವಂತಾಗಿದೆ. ಇರುವ ನೀರಿನ ಮೂಲಗಳಾದ ನೀರಿನ ಟ್ಯಾಂಕ್ಗಳ ಸುತ್ತ ಅಸ್ವಚ್ಛತೆಯಿಂದ ಸಾಂಕ್ರಾಮಿಕ ರೋಗದ ಭೀತಿ ಗ್ರಾಮಸ್ಥರಲ್ಲಿ ಕಾಡುತ್ತಿದೆ.

ಜೆಜೆಎಂ ಯೋಜನೆಯಡಿ ಎರಡು ವರ್ಷಗಳ ಹಿಂದೆಯೇ ಹಾಕಲಾದ ನಳಗಳಿಗೆ ನೀರು ಬಾರದೇ ಅವುಗಳು ಹಾಳಾಗುತ್ತಿದೆ. ರಸ್ತೆ ಮೇಲೆ ಕೈ ಬೋರವೆಲ್ ನೀರು ಹರಿಯುತ್ತಿದೆ ಹೀಗೆ ಸಾಲು ಸಾಲು ಸಮಸ್ಯೆಗಳನ್ನು ಸಾರ್ವಜನಿಕರು ಎದುರಿಸುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ ಶುದ್ಧ ಕುಡಿಯುವ ನೀರು ಸರಬರಾಜು ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆದರೆ ಇಲ್ಲಿವರೆಗೆ ಸಮರ್ಪಕ ನೀರು ಸರಬರಾಜು ಮಾಡುತ್ತಿಲ್ಲ. ಗ್ರಾಮದ ಪ್ರತಿ ಮನೆಗೆ ಅಳವಡಿಸಿರುವ ನಳಗಳು ಕಿತ್ತು ಹೋಗಿವೆ. ಇದರಿಂದ ಸರ್ಕಾರದ ಅನುದಾನ ಪೋಲಾಗಿದೆ. ಗುತ್ತೆದಾರರು ಮತ್ತು ಅಧಿಕಾರಿಗಳ ನಿರ್ಲಕ್ಷ ಇದಕ್ಕೆ ಕಾರಣ ಎನ್ನುತ್ತಾರೆ ಸ್ಥಳೀಯ ನಿವಾಸಿ ಮರಿಯಮ್ಮ ತಳವಾರ

ಸದ್ಯ ಗ್ರಾಮದ ಪ್ರತಿ ಓಣಿಯಲ್ಲಿ ಒಂದು ನಳಕ್ಕೆ ಮಾತ್ರ ದಿನಕ್ಕೆ ಎರಡು ಬಾರಿ ನೀರು ಪೂರೈಕೆ ಮಾಡಲಾಗುತ್ತಿದೆ. ಅದು ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಗ್ರಾಮದಲ್ಲಿನ ಕೈ ಬೋರವೆಲ್ ಬಳಿ ಇಂಗುಗುಂಡಿ ಇಲ್ಲದ ಕಾರಣ ನೀರು ಪೋಲಾಗಿ ರಸ್ತೆ ಮೇಲೆ ಹರಿಯುತ್ತಿದೆ.

ಕಲುಷಿತ ನೀರಿನಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾಗಬೇಕಿದೆ. ಕಿಲ್ಲಾರಹಟ್ಟಿ ಗ್ರಾ.ಪಂ ಆಡಳಿತ ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಕಿರು ನೀರು ಸರಬರಾಜು ಟ್ಯಾಂಕ್ ಸುತ್ತಲೂ ಕಸ ಮತ್ತು ಕಲುಷಿತ ನೀರು ನಿಲ್ಲುತ್ತಿದೆ ಎನ್ನುತ್ತಾರೆ ಸ್ಥಳೀಯರು.

ತಾವರಗೇರಾ ಪಟ್ಟಣದಿಂದ ನಾರಿನಾಳ ಗ್ರಾಮದ ಸಂಪರ್ಕ ರಸ್ತೆಯ ಡಾಂಬರಿಕರಣ ಹಾಳಾಗಿದೆ. ನಿತ್ಯ ಓಡಾಡುವ ರೈತರ ಎತ್ತಿನ ಬಂಡಿ, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ಸಮರ್ಪಕ ಡಾಂಬರು ರಸ್ತೆ ನಿರ್ಮಾಣ ಮಾಡಬೇಕು. ಸದ್ಯ ಬೇಸಿಗೆ ಇರುವದರಿಂದ ಕರೆಂಟ್ ಹೋದರೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದೆ ಎಂದು ಗ್ರಾಮಸ್ಥ ವಿರೂಪಣ್ಣ ತಳವಾರ ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-35-1146247302

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.