ತಾವರಗೇರಾ: ಪಟ್ಟಣದ ಸಿಂಧನೂರು ರಸ್ತೆಯ ಬುದ್ಧ ವಿಹಾರದಲ್ಲಿ ಮಾನವ ಬಂಧುತ್ವ ವೇದಿಕೆ, ರಾಜ್ಯ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಆಯೋಜಿಸಿರುವ ಕಲಬುರಗಿ ವಿಭಾಗ ಮಟ್ಟದ ವಿದ್ಯಾರ್ಥಿ ಯುವ ಜನರ ಅಧ್ಯಯನ ಶಿಬಿರದಲ್ಲಿ ಭಾನುವಾರ 2ನೇ ದಿನದ ಗೋಷ್ಠಿಗಳು ನಡೆದವು.
‘ದಲಿತ ಚಳವಳಿಯ ಹುಟ್ಟು ಮತ್ತು ಬೆಳವಣಿಗೆ’ ಕುರಿತು ಪತ್ರಕರ್ತ ಇಂದೂಧರ ಹೊನ್ನಾಪುರ ಉಪನ್ಯಾಸ ನೀಡಿದರು. ಕೆ.ಚಂದ್ರಕಾಂತ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ದೇವಪ್ಪ ದೇವರಮನಿ, ರಾಜಶೇಖರ ಹಾಗೂ ಆನಂದ ಪೂಜಾರ ಹಾಜರಿದ್ದರು.
3ನೇ ಗೋಷ್ಠಿ: ‘ಮೀಸಲಾತಿ ಮತ್ತು ಒಳಗೊಳ್ಳುವಿಕೆಯ ಸವಾಲುಗಳು’ ಕುರಿತು ಉಪನ್ಯಾಸಕ ವಿಕಾಸ ಆರ್.ಮೌರ್ಯ ಉಪನ್ಯಾಸ ನೀಡಿದರು. 4ನೇ ಗೋಷ್ಠಿಯಲ್ಲಿ ನಿವೃತ್ತ ಡಿಜಿಪಿ ಎಸ್.ಮರಿಸ್ವಾಮಿ ‘ದಲಿತ ರಾಜಕಾರಣ ಮತ್ತು ಧರ್ಮಾಂತರ’ ವಿಷಯದ ಕುರಿತು ಉಪನ್ಯಾಸ ನೀಡಿದರು. 5ನೇ ಗೋಷ್ಠಿಯಲ್ಲಿ ‘ಸಂವಿಧಾನ, ಹಿಂದುತ್ವ, ಜಾಗತೀಕರಣ ಮತ್ತು ಪ್ರಜಾಪ್ರಭುತ್ವದ ನೆಲೆಗಳು’ ವಿಷಯದ ಕುರಿತು ಚಿಂತಕ ಶಿವಸುಂದರ್ ಉಪನ್ಯಾಸ ನೀಡಿದರು.
ವಿವಿಧ ಗೋಷ್ಠಿಗಳಲ್ಲಿ ಚಿಂತಕಿ ಹಾಗೂ ಆಯೋಜಕಿ ಸಾವಿತ್ರಿ ಮುಜುಮದಾರ, ಗಾನ ಅಶ್ವತ್, ಮೆಕ್ಯಾನಿಕ್ ಶ್ರೀನಿವಾಸ, ಮಂಜುನಾಥ ಕಟ್ಟಿಮನಿ, ರಾಯಪ್ಪ, ಆನಂದ ದಿವಾಕರ, ಗಂಗಪ್ಪ, ನಮಿತಾ, ರವಿಂದ್ರ ಬೊಮ್ಮನಹಳ್ಳಿ, ವಿನಯ ರಾಮನಗರ, ನಾಗರಾಜ ಸಿಂಗಾಪುರ ಹಾಗೂ ಜಗದೀಶ ಹಾಜರಿದ್ದರು.