ಅಳವಂಡಿ: ಶಿಕ್ಷಣದಿಂದ ಮಾತ್ರ ಸಮಾಜದಲ್ಲಿನ ಪರಿವರ್ತನೆ ಸಾಧ್ಯ. ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು, ಶಿಕ್ಷಕರು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಮುನಿರಾಬಾದ್ ಡಯಟ್ ಪ್ರಾಂಶುಪಾಲ ಕಾಳಪ್ಪ ಬಡಿಗೇರ ಹೇಳಿದರು.
ಸಮೀಪದ ಬೇಟಗೇರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಳವಂಡಿ ವಲಯ ಮಟ್ಟದ ನಲಿ-ಕಲಿ ಹಾಗೂ 4-5ನೇ ತರಗತಿ ಬೋಧಿಸುವ ಶಿಕ್ಷಕರ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು.
ಮಕ್ಕಳ ಶೈಕ್ಷಣಿಕ ಸರ್ವತೋಮುಖ ಅಭಿವೃದ್ಧಿಗೆ ಕಲಿಕೆ ಗುಣಮಟ್ಟ ಮಕ್ಕಳಲ್ಲಿ ಹೆಚ್ಚಿಸಲು ಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಗುತ್ತಿದೆ. ಮಕ್ಕಳಿಗೆ ಮೂಲಕ್ಷರಗಳ, ಗಣಿತದ ಮೂಲಕ್ರಿಯೆಗಳ ಕಲ್ಪನೆ ಚನ್ನಾಗಿ ಅರ್ಥ ಮಾಡಿಸಬೇಕು. ವಿವಿಧ ಚಟುವಟಿಕೆಗಳ ಬಳಸಿ, ತಟ್ಟೆ ಚಲನೆ ಮೂಲಕ ನಲಿ-ಕಲಿ ಕಲಿಕೆ ಸಾಗಬೇಕು ಎಂದರು. ನಲಿಕಲಿ ಲೊಗೋ, ಮೆಟ್ಟಿಲುಗಳ ಬಗ್ಗೆ ಸವಿವರವಾಗಿ ತಿಳಿಸಿದರು.
ಡಯಟ್‌ನ ಹಿರಿಯ ಉಪನ್ಯಾಸಕ ಕೃಷ್ಣಾ, ಸಿಆರ್‌ಪಿಗಳಾದ ವಿಜಯಕುಮಾರ ಟಿಕಾರೆ, ಬಸವರಾಜ, ದೇವರಡ್ಡಿ, ವೀರೇಶ ಕೌಟಿ, ಮುಖ್ಯ ಶಿಕ್ಷಕಿ ಕಸ್ತೂರಿ ಬಿ., ಸಂಪನ್ಮೂಲ ವ್ಯಕ್ತಿ ಬಸವರಾಜ ಜೋಗಿನ, ಲಕ್ಷ್ಮಣಕುಮಾರ, ಬಸವರಾಜ ಕೆ., ವಿಶ್ವನಾಥ ಶಿಕ್ಷಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.